ಜಗಜ್ಯೋತಿ ಬಸವಣ್ಣನವರ ಜಯಂತಿಯ ಪ್ರಯುಕ್ತ ಇಂದು ಬೆಳಗಾವಿಯ ರಾಮತೀರ್ಥ ನಗರದ ಪ್ರಮುಖ ವೃತ್ತವನ್ನು “ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ” ಎಂದು ನಾಮಕರಣ ಮಾಡಿ,

ಫಲಕವನ್ನು ನೆಟ್ಟು ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು.
ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಸೂಕ್ತ ಮಾನ್ಯತೆಗಳೊಂದಿಗೆ ಈ ವೃತ್ತವನ್ನು ಮಾದರಿ ಸಾರ್ವಜನಿಕ ಆಕರ್ಷಣೆಯ ಕೇಂದ್ರವಾಗಿ ಮಾರ್ಪಡಿಸಿ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಕೀರ್ತಿಯನ್ನು ಸಾರುವ ಆಕರ್ಷಣೀಯ ಸ್ಥಳವಾಗುವಂತೆ
ಪರಿವರ್ತಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಮಹಾಂತೇಶ ವಕ್ಕುಂದ, ರಾಜುಗೌಡ ಪಾಟೀಲ, ವಿಜಯ ನಂದಿ, ನವೀನ ಹಿರೇಮಠ, ನಗರ ಸೇವಕ ಹನಮಂತ ಕೊಂಗಾಲಿ ಸೇರಿದಂತೆ ರಾಮತೀರ್ಥ ನಗರ ಹಾಗೂ ಆಟೋ
ನಗರದ ಪ್ರಮುಖ ಹಿರಿಯರು, ಬಂಧುಗಳು, ಸಮಾಜ ಸೇವಕರು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಬಸವ ಜಯಂತಿಗೆ ಮೆರಗು ತಂದರು.