ದಾವಣಗೆರೆ – ಸುದ್ದಿಗಳು ವಸ್ತು ನಿಷ್ಠೆಯಿಂದ ಕೂಡಿರಲಿ – ಮುಖ್ಯ ಮಂತ್ರಿ ಸಿದ್ದರಾಮಯ್ಯ ಪತ್ರಿಕೆಗಳು ವಸ್ತು ನಿಷ್ಠೆಯಿಂದ ಸುದ್ದಿ ಮಾಡಿದರೆ ಸಮಾಜ ಬದಲಾವಣೆ ಯಾಗ ಬಹುದು ಎಂದು ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ಜರಗಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 38 ನೇ ಸಮ್ಮೇಳನವನ್ನು ರಾಜ್ಯ ಅದ್ಯಕ್ಷ ಶಿವಾನಂದ ತಗಡೂರ ರವರ ಅದ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಶಿವಾನಂದ ತಗಡೂರ ಮುಖ್ಯಮಂತ್ರಿಗಳಿಗೆ ಸ್ವಾಗತಿಸಿ ಸತ್ಕರಿಸಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮಾದ್ಯಮಗಳು ವಸ್ತು ನಿಷ್ಟೆಯಿಂದ ಸುದ್ದಿ ಮಾಡಬೇಕು ಶೇಕಡಾ ನೂರರಷ್ಟು ಸತ್ಯ ವಿಲ್ಲದಿದ್ದರು ಶೇಕಡಾ ತೊಂಬತ್ತು ಭಾಗವಾದರೂ ಸುದ್ದಿ ಸತ್ಯಕ್ಕೆ ಸಮಿಪದಲ್ಲಿರಬೇಕು ಅಂದಾಗ ಸಮಾಜ ಸುಧಾರಣೆಯಾಗ ಬಹುದು ಮತ್ತು ಸೌಲಭ್ಯ ವಂಚಿತರಿಗೆ ಸಹಾಯವಾಗಬಹುದು ಎಂದು ಹೇಳಿದರು.
ವೆದೀಕೆ ಮೇಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಮಾಜಿ ಸಚಿವ ಡಾ, ಶಾಮನೂರ ಶಿವಶಂಕರಪ್ಪ, ಪುಂಡಲಿಕ ಬಾಳೋಜಿ, ಶಾಸಕ ದೇವೆಂದ್ರ ಪ್ರಸಾದ, ಜಿಲ್ಲಾಧಿಕಾರಿ ಎಂ ವೇಂಕಟೆಶ, ಎಸ್ಪಿ, ಉಮಾ ಪ್ರಸಾದ ಉಪಸ್ಥಿತರಿದ್ದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಸಮಾಜದ ಮೇಲೆ ಬೆಳಕು ಚಲ್ಲುವ ಪತ್ರಕರ್ತರು ವಸ್ತುನಿಷ್ಟ ವರದಿಗಳನ್ನು ಮಾಡಿ ತಪ್ಪುಗಳನ್ನು ತಿದ್ದುವ ಕೇಲಸ ಮಾಡಬೇಕು ಇತ್ತಿಚಿಗೆ ಕೆಲ ಮಾದ್ಯಮದವರು ಕಪಿಮುಷ್ಟಿಗಳ ತಾಳಕ್ಕೆ ತಮ್ಮ ವೃತ್ತಿಯ ನೈಜತೆ ಕಳೆದುಕೋಳ್ಳುತ್ತಿರುವ ಸಂಗತಿ ಅಘಾತಕಾರಿಕೆ ಯಾಗಿದೆ ಎಂದರು.
ರಾಜ್ಯಾದ್ಯಕ್ಷ ಶಿವಾನಂದ ತಗಡೂರ ಮಾತಮಾಡಿ ರಾಜ್ಯದಲ್ಲಿ ಗ್ರಾಮಿಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರರ್ಕರಿಗೆ ಉಚಿತ ಸಾರಿಗೆ ಸೌಲಭ್ಯ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಗಿದೆ ಕಾರಣ ಬರುವ ಬಜೇಟ್ ದಲ್ಲಿ ಮುಖ್ಯಂತ್ರಿಗಳು ಗ್ರಾಮಿಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷನೆ ಮಾಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ವಿವಿಧ ಜಿಲ್ಲೆಯ ಕಾರ್ಯನಿರತ ಪತ್ರಕರ್ತರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ದಾವಣಗೆರೆ.