Nippani

ನಿಪ್ಪಾಣಿಯಲ್ಲಿ ‌ಕಾರವೊಂದು 5 ಬೈಕ್ ಗಳಿಗೆ ಡಿಕ್ಕಿ

Share

ಚಿಕ್ಕೋಡಿ:ಕಾರೊಂದು ಏಕಾಏಕಿ‌ 5 ಬೈಕಗಳಿಗೆ ಡಿಕ್ಕಿ ಹೊಡೆದ ಘಟನೆ ಬೆಳಗಾವಿ ಜಿಲ್ಲೆಯ ‌ನಿಪ್ಪಾಣಿಯ ಕಿತ್ತೂರು ರಾಣಿ ಚನ್ನಮ್ಮ ಚೌಕ್ ಬಳಿಯ ಗಂಗಾ ಜೆರಾಕ್ಸ್ ಎದುರು ಘಟನೆ ನಡೆದಿದೆ.

ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ಕಿತ್ತೂರು ಚನ್ನಮ್ಮ ಚೌಕ್ ಬಳಿ ಶಾಪಿಂಗ್ ಮಾಡಲು ಮೋಟಾರ್ ನಿಲ್ಲಿಸಿದ್ದರು. ಚಾಲಕ ವಾಹನವನ್ನು ನ್ಯೂಟ್ರಲ್‌ನಲ್ಲಿ ಇರಿಸಿ ಶಾಪಿಂಗ್‌ಗೆ ತೆರಳಿದ್ದಾನೆ.

ಸ್ವಲ್ಪ ಸಮಯದ ನಂತರ ಮೋಟಾರ್ ಮುಂದಕ್ಕೆ ಚಲಿಸಿ ಪಕ್ಕದಲ್ಲಿ ನಿಲ್ಲಿಸಿದ್ದ 5 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಕೆಲ ಬೈಕ್‌ಗಳಿಗೆ ಹಾನಿಯಾಗಿದೆ. ಘಟನೆ ಅರಿತ ಚಾಲಕ ಸ್ಥಳಕ್ಕೆ ಧಾವಿಸಿ ಮೋಟಾರ್ ನಿಲ್ಲಿಸಿದ್ದಾರೆ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ.

Tags:

#innews #innewsbelagavi #belgaumnews #NippaniCarAccident #RoadIncident #VehicleCollision #AccidentReport #TrafficAlert #SafetyConcerns
error: Content is protected !!