Belagavi

ಜೆಡಿಎಸ್ ಪಕ್ಷಕ್ಕೆ ‘ಆಯನೂರು ಮಂಜುನಾಥ್’ ಗುಡ್ ಬೈ: ನಾಳೆ ಅಧಿಕೃತವಾಗಿ ‘ಕಾಂಗ್ರೆಸ್’ ಸೇರ್ಪಡೆ

Share

ಶಿವಮೊಗ್ಗ : ಕಳೆದ ಕೆಲವು ದಿನಗಳಿಂದ ನನ್ನ ಕೇಂದ್ರೀಕೃತವಾಗಿ ರಾಜಕೀಯ ಸುದ್ದಿಗಳು ನಡೆಯುತ್ತಿದೆ. ಇದಕ್ಕೆ ಪೂರ್ಣ ವಿರಾಮ ನೀಡಲು ಬಂದಿದ್ದೇನೆ. ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ‌ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ.
ನಾಳೆ ಬೆಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಪಕ್ಷದ ಎಲ್ಲಾ ಮುಖಂಡರ ಸಹಮತಿ ನೀಡಿ‌ ಸಹಕಾರ ನೀಡುವ ಭರವಸೆ ನೀಡಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವ ಅವಕಾಶ ಒದಗಿ ಬಂದಿತ್ತು.ಆದರೆ ಸೇರ್ಪಡೆಯಾಗಿರಲಿಲ್ಲ ಎಂದರು.

ಮುಂಬರುವ ತಾಲ್ಲೂಕು ಪಂಚಾಯ್ತಿ ಹಾಗೂ‌ ಜಿಲ್ಲಾ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಮ್ಮ‌ಶಕ್ತಿಯನ್ನು ಧಾರೆ ಎರೆಯುತ್ತೇವೆ ಎಂದರು.

ರಾಜಕಾರಣವೇ ಒಂದು ಅವಕಾಶ.ಕಾಂಗ್ರೆಸ್ ಕೊನೆಯ ಬಸ್ ಸ್ಟಾಂಪ್ ಅಂತ ಕಾಣುತ್ತದೆ.ಬಿಜೆಪಿಯಿಂದ ಆಹ್ವಾನ ಬಂದಿಲ್ಲ ಎಂದು‌ ಸ್ಪಷ್ಟಪಡಿಸಿದರು.
ಆತಂಕಕ್ಕೆ ಒಳಗಾದವರು ನನ್ನನ್ನು ವಿರೋಧಿಸುತ್ತಿದ್ದಾರೆ.ದೊಡ್ಡ ಪಕ್ಷದಲ್ಲಿ ವಿರೋಧ ಇರುವುದು ಸಹಜ. ಕಾಂಗ್ರೆಸ್ ನ ಬಹುತೇಕ ಮುಖಂಡರು ಸ್ವಾಗತಿಸಿದ್ದಾರೆ ಎಂದರು.

Tags:

Ayanuru Manjunath JDS PARTY
error: Content is protected !!