Belagavi

ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರದಲ್ಲಿ ಮನಸ್ತಾಪ, ಕೊಲೆಯಲ್ಲಿ ಅಂತ್ಯ

Share

ಚಿಕ್ಕಮಗಳೂರು : ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರದಲ್ಲಿ ನಡೆದ ಮನಸ್ತಾಪ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಆಸ್ತಿ ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ್ದ ಕಾರ್ತಿಕ್ (45)ಕೊಲೆಯಾದ ವ್ಯಕ್ತಿ. ಮಧುಗುಂಡಿ ಗ್ರಾಮದ ನಿವಾಸಿ ಸಂತೋಷ್ ಕೊಲೆ ಮಾಡಿದ ಆರೋಪಿ.

ಮಧುಗುಂಡಿ ಗ್ರಾಮದ ನಿವಾಸಿ ಸಂತೋಷ್ ರಾತ್ರಿ ಕುಡಿದ ಮತ್ತಿನಲ್ಲಿ ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ಮಾತುಕತೆಗೆ ಬಂದಿದ್ದ ಕಾರ್ತಿಕ್ ಎಂಬಾತನನ್ನು ಮನೆಯೊಳಗಡೆ ಮಚ್ಚಿನಿಂದ ಹಲ್ಲೆ ನಡೆಸಿದ್ದ, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಲ್ಲೆ ಮಾಡುವ ಸಮಯ ಬಿಡಿಸಲು ಬಂದ ಸಂತೋಷ್ ನ ತಂದೆ ಬಾಸ್ಕರ ಗೌಡ (70 ವರ್ಷ) ಮತ್ತು ತಾಯಿ ಪ್ರೇಮ (52 ವರ್ಷ) ರವರಿಗೂ ಸಂತೋಷ್ ಮಚ್ಚಿನಿಂದ ಹಲ್ಲೆ ನಡೆಸಿದ್ದು‌ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಘಟನೆ ನಡೆದ ಬಳಿಕ ಆರೋಪಿ ಸಂತೋಷ್ ಬಾಳೂರು ಪೊಲೀಸ್ ಠಾಣೆಗೆ ತಾನಾಗಿಯೇ ಬಂದು ಶರಣಾಗಿದ್ದಾನೆ.
ಮೃತ ಕಾರ್ತಿಕ್ ಭಾಸ್ಕರ್ ಗೌಡ ರವರ ಜಮೀನನ್ನು ಬೆಂಗಳೂರು ಮೂಲದ ಉದ್ಯಮಿಗೆ ಮಾರಾಟ ಮಾಡಲು ವ್ಯಾಪಾರ ಮಾಡಿಕೊಟ್ಟಿದ್ದು, ಅದರ ಮುಂಗಡವಾಗಿ ಬಂದ 12 ಲಕ್ಷ ರೂ. ಹಣ ಕೊಡಿಸಿದ್ದು, ಅ ಹಣವನ್ನು ಭಾಸ್ಕರ್ ಗೌಡ ಅವರ ಮೊದಲ ಮಗ ಶಿವು ಕುಮಾರ್ ತೆಗೆದುಕೊಂಡು ಹೋಗಿದ್ದಾನೆ. ಈ ವಿಚಾರದಲ್ಲಿ ಮನಸ್ತಾಪಗೊಂಡ ಸಂತೋಷ್ ಕಾರ್ತಿಕ್ ನನ್ನು ಕೊಲೆ ಮಾಡಿರುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

Tags:

murder
error: Content is protected !!