ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಮಹಾಮಾತಾ ಕಾಳಿಕಾದೇವಿ ರಥೋತ್ಸವ ಶುಕ್ರವಾರ ಜರುಗುವದು ಎಂದು ಬ್ರಹ್ಮಾನಂದ ಅಜ್ಜನವರು ಹೇಳಿದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಪ್ರತಿ ವರ್ಷದಂತೆ ಕಾಳಿಕಾದೇವಿ ಜಾತ್ರೆಯಲ್ಲಿ ಗಾಯತ್ರಿ ಹೋಮ, ಚಂಡಿಕಾ ಹೋಮ ಕಾಮೇಷ್ಟಿ ಯಜ್ಞ ಹವನಾದಿಗಳು ಮೂರು ದಿನಗಳ ಕಾಲ ಜರುಗಿ ಕೋನೆಯದಿನ ಶುಕ್ರವಾರ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಶಿವಾನುಭವ ಗೋಷ್ಟಿ ಹಾಗೂ ಪಲ್ಲಕ್ಕಿ ಉತ್ಸವ,ರಥೋತ್ಸವ ಜರಗುತ್ತವೆ ಕಾರಣ ಭಕ್ತರು ದೇವಿ ಆಶಿರ್ವಾದ ಪಡೆದುಕೊಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ದೇವಸ್ಥಾನ ಉಸ್ತುವಾರಿ ಮುಕುಂದ ಮಠದ, ಗೋಪಾಲ ಮಠದ ಹಾಗೂ ಸದಸ್ಯರು ಉಪಸ್ಥಿತರಿದ್ದರು.