Raichur

ಸಿದ್ದರಾಮಯ್ಯ ಸುಳ್ಳಿನ ಅಗ್ರಗಣ್ಯ ನಾಯಕ: ರಾಯಚೂರು ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಗುಡುಗಿದ ಸಿಎಂ ಬೊಮ್ಮಾಯಿ..!

Share

ಕಾಂಗ್ರೆಸ್ ನಾಯಕ ಸಿದರಾಮಣ್ಣ ಅವರು ಸಮಾಜವಾದಿಯನ್ನು ಯಾವಾಗಲೋ ಮಡಚಿ ಮನೆಯಲ್ಲಿ ಇಟ್ಟಿದ್ದಾರೆ. ಈಗ ಅವರು ಒಬ್ಬ ಸಣ್ಣ ಹುಡುಗನ ಕೈ ಕೆಳಗೆ ಕೆಲಸ ಮಾಡುತ್ತಿದ್ದಾರೆ. ಅವನು ಓಡಿ ಅಂದ್ರೆ ಓಡುತ್ತಾರೆ. ಕೂರು ಅಂದ್ರೆ ಕೂರುತ್ತಾರೆ. ಅವರು ಸ್ವಾಭಿಮಾನ ಕಳೆದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.

ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ಅವರು ಸುಳ್ಳಿನ ಅಗ್ರಗಣ್ಯ ನಾಯಕ. ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಅವರ ಹಿಂದೆ ಈಗ ಹಿಂದುಳಿದವರಿಲ್ಲ. ದಲಿತರೂ ಇಲ್ಲ. ಇರುವುದು ಕೇವಲ ಅಲ್ಪಸಂಖ್ಯಾತರು. ಅಹಿಂದ ಎಂದರೆ ಅಲ್ಪಸಂಖ್ಯಾತರು. ಹಿಂದುಳಿದವರು ಮತ್ತು ದಲಿತರು ಎಂದರ್ಥ. ಆದರೆ ಈವಾಗ ದಲಿತರು ನಿಮ್ಮನ್ನು ಬಿಟ್ಟಿದ್ದಾರೆ. ನಿಮ್ಮ ಜೊತೆಗೆ ಉಳಿದಿರುವವರು ಅಲ್ಪಸಂಖ್ಯಾತರು ಮಾತ್ರ. ನಿನ್ನೆ ಸಿದ್ದರಾಮಯ್ಯ ರಾಯಚೂರಿಗೆ ಯಾಕೆ ಬಂದರು ಎಂದರೆ ಅವರ ರಾಜಕುಮಾರ ರಾಯಚೂರಿಗೆ ಬರುತ್ತಾನೆ. ಅದಕ್ಕೆ ಜನ ಕೂಡಿಸುವ ಸಲುವಾಗಿ ಬಂದಿದ್ದರು ಎಂದು ಕಿಡಿಕಾರಿದರು.

ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗುತ್ತೆ. ಕಾಂಗ್ರೆಸ್ ನಾಯಕರ ಕನಸು ಕನಸಾಗಿಯೇ ಉಳಿಯಲಿದೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ಜನ ನಿಮ್ಮನ್ನು ಬಿಡಲ್ಲ. ಕಾಂಗ್ರೆಸ್ಸಿಗರು ಈಗಿರುವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ರಾಯಚೂರು ಜಿಲ್ಲೆಯಲ್ಲಿ ಏಳಕ್ಕೆ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ರಾಯಚೂರು ಜಿಲ್ಲೆಯಿಂದಲೇ ವಿಜಯ ಸಂಕಲ್ಪ ಶುರು ಮಾಡುತ್ತಿದ್ದೇವೆ. 2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪ ಮಾಡಿದ್ದೇವೆ. ನಾವು ರೈತರು, ಬಡವರು, ವಿದ್ಯಾರ್ಥಿಗಳಿಗಾಗಿ ಯೋಜನೆ ಜಾರಿಗೆ ಮಾಡಿದ್ದೇವೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪೆÇ್ರೀತ್ಸಾಹ ಧನ ನೀಡಿದೆ. ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಬೊಮ್ಮಾಯಿ ಆರ್‍ಎಸ್‍ಎಸ್ ಕೈಗೊಂಬೆ ಅಂತಾ ವಿಪಕ್ಷನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ವಿಚಾರಕ್ಕೆ ಮಾತನಾಡಿದ ಸಿಎಂ ಬೊಮ್ಮಾಯಿ ಆರ್‍ಎಸ್‍ಎಸ್ ಇಡೀ ಭಾರತವನ್ನು ಒಗ್ಗೂಡಿಸುತ್ತಿದೆ. ಆರ್‍ಎಸ್‍ಎಸ್ ದೇಶದಲ್ಲಿ ದೀನದಲಿತರ ಸೇವೆ ಮಾಡುತ್ತಿದೆ. ಕಾಂಗ್ರೆಸ್‍ಗೆ ಆರ್‍ಎಸ್‍ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಿಂದ ಬಂದಿರುವವರು, ಕಾಂಗ್ರೆಸ್ ಸೇರಿದ ದಿನವೇ ಸಮಾಜವಾದಿ ಮನೆಯಲ್ಲಿ ಮಡಚಿಟ್ಟಿದ್ದೀರಿ ಎಂದು ವಾಗ್ದಾಳಿ ಮಾಡಿದರು.

ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಸೇರಿದಂತೆ ಇನ್ನಿತರ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Tags:

error: Content is protected !!