Vijaypura

ಹಿಜಾಬ್ ಕೇಸರಿ ವಿವಾದ ಬಳಿಕ ಈಗ ತಿಲಕ ವಿವಾದ

Share

ಹಿಜಾಬ್ ಕೇಸರಿ ಶಾಲು ವಿವಾದ ಕಗ್ಗಂಟಾಗಿರುವಾಗಲೇ ಇದೀಗ ಸಿಂಧೂರ ವಿವಾದ ಹುಟ್ಟಿಕೊಂಡಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲೂ ಸಿಂಧೂರ ವಿಚಾರ ಪ್ರತಿಧ್ವನಿಸಿದೆ. ಇಂಡಿ ಪಟ್ಟಣದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯೋರ್ವನಿಗೆ ತರಗತಿಗೆ ಪ್ರವೇಶ ನೀಡಲು ನಿರಾಕರಿಸಲಾಗಿದೆ.

ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ನಿರಾಕರಿಸಿದ್ದನ್ನು ಹಿಜಾಬ್ ಕೇಸರಿ ಶಾಲು ವಿಚಾರ ‌ಕುಂಕುಮ ವಿಚಾರಕ್ಕೆ ಥಳಕು ಮಾಡಲಾಗಿದೆ. ವಿದ್ಯಾರ್ಥಿ ಯೋರ್ವ ಹಾಗೂ ಕಾಲೇಜಿನ ದೈಹಿಕ ಉಪನ್ಯಾಸಕ ನಡುವೆ ವಾಗ್ವಾದ ನಡೆಯಿತು. ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ಹಾಗೂ ‌ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿ ನಡೆದಿದ್ದು ಹಿಜಾಬ್ ಹಾಗೂ ಕೇಸರಿ ಶಾಲು ಹೊರತು ಪಡಿಸಿ ಹಣೆಗೆ
ಕುಂಕುಮ‌ – ನಾಮ ಹಾಕಲು‌ ಯಾಕೆ ಅನುಮತಿಯಿಲ್ಲಾ ಎಂದು ವಿದ್ಯಾರ್ಥಿ‌ ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮಧ್ಯೆ ವಾಗ್ವಾದ ನಡೆದು ವಿದ್ಯಾರ್ಥಿಯನ್ನಾ ಸಮಾಧಾನ ಪಡಿಸಿ ತರಗತಿಯೊಳಗೆ ಕಳುಹಿಸಲು ಉಪನ್ಯಾಸಕರ ಪ್ರಯತ್ನ ಪಟ್ಟರು. ವಿದ್ಯಾರ್ಥಿಗೆ ಮನವೊಲಿಸಿ ಸ್ಥಳದಲ್ಲಿದ್ದ ಪೊಲೀಸರು ತರಗತಿಗೆ ಕಳುಹಿಸಿದರು‌. ಈ ಘಟನೆಯಿಂದ
ಕಾಲೇಜಿನಲ್ಲಿ ಕೆಲ‌ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Tags:

error: Content is protected !!