Belagavi

ಆರೋಪಿಗಳನ್ನ ಬಂಧಿಸುವವರೆಗೂ ಮೃತದೇಹಗಳನ್ನ ನಾವೂ ಮುಟ್ಟುವುದಿಲ್ಲ-ಕ್ರೀಷಾ ಸುಸೈಡ್‍ಕೇಸ್‍ಗೆ ಹೊಸ ಟ್ವೀಸ್ಟ್

Share

ಬೆಳಗಾವಿಯ ಹಿಂಡಲಗಾ ಗಣೇಶ ಮಂದಿರ ಹತ್ತಿರವಿರುವ ಅರ್ಗನ್‍ ತಾಲಾಬ್‍ನಲ್ಲಿ 2 ಪುಟ್ಟ ಮಕ್ಕಳೊಂದಿಗೆ ವಿವಾಹಿತೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆಇಂದು ಮತ್ತೆ ಹೊಸ ತಿರುವು ಸಿಕ್ಕಿದೆ.ಇದು ಆತ್ಮಹತ್ಯೆಯಲ್ಲ ಈ ಮೂವರನ್ನ ಕೊಲೆ ಮಾಡಲಾಗಿದೆ ಆರೋಪಿಗಳನ್ನ ಬಂಧಿಸುವ ವರೆಗೂ ಶವಗಳನ್ನ ತೆಗೆದುಕೊಳ್ಳುವುದಿಲ್ಲವೆಂದು ಮೃತರ ಸಂಬಂಧಿಕರು ಪಟ್ಟು ಹಿಡಿದ್ದಾರೆ.

ಅಮಾಯಕಿಯೊಂದಿಗೆ ನಡೆದಿದೆ ಅನ್ಯಾಯ.. ನಮಗೆ ನ್ಯಾಯ ಕೊಡಿಸಿ…ನ್ಯಾಯ ಕೊಡಿಸಿ… ಬೇಕೆ ಬೇಕು ನ್ಯಾಯ ಬೇಕು ಎಂದು ಪ್ರತಿಭಟಿಸುತ್ತಿರುವ ಇವರು ಮೊನ್ನೆ ಹಿಂಡಲಗಾ ಹತ್ತಿರದ ಅರ್ಗನ್‍ ತಾಲಾಬ್‍ನಲ್ಲಿ 2 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಕ್ರಿಷಾ ಕೇಶವಾನಿಯ ಸಂಬಂಧಿಗಳು.

ಹೌದು ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿ ಕ್ರಿಷಾ ಕೇಶ್ವಾನಿ (37) ಎಂಬ ಮಹಿಳೆ ಕೌಟುಂಬಿಕ ಸಮಸ್ಯೆಗಳಿಗೆ ಮನನೊಂದು ನಿನ್ನೆ ಶುಕ್ರವಾರ ಅರಗನ್‍ ತಾಲಾಬ್‍ಗೆ ಹಾರಿ ತನ್ನಇಬ್ಬರು ಮಕ್ಕಳು ಭಾವಿರ್(4), ವೀರೇನ್(7), ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ರು. ಮೊನ್ನೆ ಸಾಯಂಕಾಲ ಎಸ್‍ಡಿಆರ್‍ಎಫ್.ಹಾಗೂ ಎಪಿಎಂಸಿ ಪೊಲೀಸ್‍ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಹಾಗೂ ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ.ಇನ್ನೊಂದು ಮೃತದೇಹವನ್ನ ನಿನ್ನೆ ಮಧ್ಯಾಹ್ನಎಸ್‍ಡಿಆರ್‍ಎಫ್‍ತಂಡದ ವತಿಯಿಂದ ಹೊರತೆಗೆಯಲಾಗಿತ್ತು.ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಆದರೇ ಇಂದು ಸಿಂಧಿ ಪಂಚಾಯತ್‍ನ ಜನರಿಂದ ಕೇಸ್ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಡತರಲಾಗುತ್ತಿದೆ.ಒಂದು ವೇಳೆ ಕೇಸ್ ಹಿಂದಕ್ಕೆತೆಗೆದುಕೊಳ್ಳದಿದ್ದರೇ, ಸತ್ತವಳ ವಿಡೀಯೋ ವೈರಲ್ ಮಾಡಿ ಹೆಸರುಕೆಡಿಸುವ ಬೆದರಿಕೆ ಹಾಕಲಾಗುತ್ತಿದೆ.ಎಫ್‍ಐಆರ್‍ದಾಖಲಿಸಲು ಉದ್ಧೇಶಪೂರ್ವಕವಾಗಿ ತಡಮಾಡಿ ಆರೋಪಿಗಳು ಪರಾರಿಯಾಗಲು ಅವಕಾಶ ನೀಡಲಾಗಿದೆ.ವೀಕಿ ಛತಾನೀ, ಮನೀಷ್ ಕೇಶವಾನಿ, ಆರತಿ ಕೇಶವಾನಿ, ಮೀನಾ ಕೇಶವಾನಿ ಪೂಜಾಕರಾಡೆ ಅವರನ್ನ ಬಂಧಿಸಬೇಕು ಅಲ್ಲಿಯ ವರೆಗೂ ನಾವೂ ಮೃತದೇಹಗಳನ್ನು ಮುಟ್ಟುವುದಿಲ್ಲ ಎಂದು ಮೃತಳ ಸಹೋದರಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮೃತರ ಸಂಬಂಧಿ ಅಭಿಜೀತ್‍ ಅವರು ಆರೋಪಿಗಳನ್ನ ಡೂಗಎನ್ನುವವರು ಪರಾರಿಯಾಗಲೂ ಅನುವು ಮಾಡಿಕೊಟ್ಟಿದ್ದಾರೆ. ಎಫ್‍ಐಆರ್ ನೀಡಲೂ ಕೂಡತಡ ಮಾಡಲಾಗಿದೆ .ಆರೋಪಿಗಳನ್ನ ಬಂಧಿಸಬೇಕು ಅಲ್ಲದೇ ಉದ್ಧೇಶಪೂರ್ವಕವಾಗಿ ಎಫ್‍ಐಆರ್‍ದಾಖಲಿಸಲು ತಡ ಮಾಡಿದ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಆಡಿಯೋವೊಂದನ್ನ ವೈರಲ್ ಮಾಡಿ ಕ್ರೀಷಾಳಿಗೆ ಮಾನಸಿಕ ಹಿಂಸೆ ನೀಡಲಾಗಿದೆ.ಸತ್ಯಾಸತ್ಯತೆ ಪರಿಶೀಲಿಸದೇ ಆಕೆಯ ಮೊಬೈಲ್ ಕಸಿದುಕೊಂಡು ಕೋಣೆಯಲ್ಲಿಕಟ್ಟಿ ಹಾಕಿ ಹಿಂಸೆ ನೀಡಿದ್ದಾರೆಎಂದರು.

ಎಲ್ಲಿಯವರೆಗೂ ಆರೋಪಿಗಳನ್ನ ಬಂಧಿಸುವುದಿಲ್ಲವೋ ಅಲ್ಲಿಯವರೆಗೂ ತಾವೂ ಮೃತ ದೇಹಗಳನ್ನ ಮುಟ್ಟುವುದಿಲ್ಲವೆಂದು ಮೃತ ಕ್ರೀಷಾ ಸಂಬಂಧಿಕರು ಪಟ್ಟು ಹಿಡಿದಿದ್ದು, ಪೊಲೀಸ್ ಇಲಾಖೆ ಈ ಕುರಿತುಯಾವಕ್ರಮ ಕೈಗೊಳ್ಳುತ್ತದೆ ಎಂಬದನ್ನಕಾಯ್ದು ನೋಡಬೇಕಿದೆ.

 

Tags:

error: Content is protected !!