ಖಾನಾಪುರ ತಾಲೂಕಿನ ನಂದಗಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಣಮಂತ ಭೀಮರಾಯ ಪಾಟೀಲ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದೆ.
ನಂದಗಡದ ಎಪಿಎಂಸಿ ಸಭಾಗೃಹದಲ್ಲಿ ನಡೆದ ಸಭೆಯಲ್ಲಿ 12 ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಕೈ ಎತ್ತುವ ಮೂಲಕ ಅಧ್ಯಕ್ಷ ಹಣಮಂತ ಪಾಟೀಲ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರು. ಇದರಲ್ಲಿ 10 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದರು. 2 ಸದಸ್ಯರು ಕೈ ಎತ್ತದೇ ಸುಮ್ಮನೆ ಕುಳಿತುಕೊಂಡರು. 10 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಪರವಾಗಿ ಇರುವುದರಿಂದ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಗೆ ಅನುಮೋದನೆ ಸಿಕ್ಕಿತು. ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಜಿ.ಬಿ.ಕಬ್ಬೇರಳ್ಳಿ ಸರ್ಕಾರದ ನಿಯಾಮಾನುಗಳಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಈ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯನ್ನು ನಡೆಸಿದರು. ಅದೇ ರೀತಿ ಸಹಕಾರ್ಯದರ್ಶಿ ಕೆ.ಎ.ಮುಗಳಿ, ಎಸ್.ಎಸ್.ಕಂಗ್ರಾಳಕರ ಕೂಡ ಕಾರ್ಯನಿರ್ವಹಿಸಿದರು.
ಈ ವೇಳೆ ಎಪಿಎಂಸಿ ಸದಸ್ಯ ಬಸವರಾಜ ಮುಗಳಿಹಾಳ ಮಾತನಾಡಿ ಅಧ್ಯಕ್ಷರಾದ ಹನುಮಂತ ಪಾಟೀಲ ಅವರು ಅಭಿವೃದ್ಧಿ ಕೆಲಸಗಳಿಗಾಗಿ ಸದಸ್ಯರಿಗೆ ಯಾವುದೇ ರೀತಿ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಅವರ ರಾಜೀನಾಮಗೆ ಆಗ್ರಹಿಸಿದ್ದೇವೆ. ಇಂದು ಅವಿಶ್ವಾಸದ ಮೂಲಕ ಕೆಳಗಿಳಿಸಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಎಪಿಎಂಸಿ ಉಪಾಧ್ಯಕ್ಷ ಉಪಾಧ್ಯಕ್ಷ ದುರ್ಗಾಪ್ಪ ತಳವಾರ, ರಾಮಚಂದ್ರ ಪಾಟೀಲ್, ಪರಶುರಾಮ ಕದಮ್, ಸಂಜಯ್ ಪಾಟೀಲ್, ಲಕ್ಷ್ಮೀ ಕಂಗ್ರಾಳಕರ, ಭಾರತಿ ಮೂಲಿಮನಿ, ಮಾರುತಿ ಗುರವ, ಸುಭಾμï ಗಾವಡಾ, ಖೇಮಾಜಿ ಮಾದಾರ, ಶಬ್ಬಿರ ಮುಜಾವರ ಉಪಸ್ಥಿತರಿದ್ದರು.