ಧಾರವಾಡ ತ್ಯಾಜ್ಯ ವಿಲೇವಾರಿ ಘಟಕದಿಂದ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಯಾಗುತ್ತಲೇ ಇದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳ ಕಾರ್ಯವೈಖರಿಗೆ ಘಟಕದ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸಕ್ಕೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ವಿಷಪೂರಿತ ಹೋಗೆ ಸೇವೆನೆ ಮಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ.
ಹೌದು ಧಾರವಾಡದ ಜನ್ನತ ಜನಗರದ ಬಳಿ ಇರುವ ಹುಬ್ಬಳ್ಳಿ ಧಾರವಾಡ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರದ ಬಹುತೇಕ ತ್ಯಾಜ್ಯ ಸುರಿಯುತ್ತಾ ಬರಲಾಗುತ್ತಿದೆ. ನಿತ್ಯ ಕಸವನ್ನು ಮಹಾನಗರ ಪಾಲಿಕೆ ಎಲ್ಲ ಕಸವನ್ನು ಇಲ್ಲಿಯೇ ಡಂಪ್ ಮಾಡುತ್ತಿದ್ದು, ಇದೇ ಕಸದ ರಾಶಿಗೆ ಕಿಡೇಗಳು ಆಗಾಗ್ಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಕಸ ವಿಲೇವಾರಿ ಘಟಕದಿಂದ ವಿಷಪೂರಿತ ಗಾಳಿ ಅಕ್ಕಪಕ್ಕದ ನಿವಾಸಿಗಳು ಸೇವಿಸು ದೌರ್ಭಾಗ್ಯ ನಿರ್ಮಾಣವಾಗಿದೆ. ವಿಷಪೂರಿತ ಗಾಳಿಯಿಂದಾಗಿ ಜನ್ನತ ನಗರ, ಬನಶಂಕರಿ ನಗರ, ಲಕ್ಷ್ಮಿ ನಗರ, ಟೋಲ್ ನಾಕಾ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳ ಆರೋಗ್ಯಕ್ಕೆ ಈ ವಿಷಪೂರಿತ ಗಾಳಿ ಸೇವೆನಿಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಕಿಡಗೇಡಿಗಳ ಕೃತ್ಯದಿಂದ ಬೆಂಕಿ ನಂದಿಸಲು ಅಗ್ನಿ ಶಾಸಮಕದಳದ ಸಿಬ್ಬಂದಿ ಹೈರಾಣಾಗಿದ್ದು, ಕೊನೆ ಬಂಕಿ ಕಂಟ್ರೋಲ್ ಮಾಡಿದ್ದಾರೆ. ಆದರೆ ಎರಡ ದಿನಕೊಮ್ಮೆ ಇದೇ ರೀತಿ ಕಸದ ಗುಡ್ಡಕ್ಕೆ ಬೆಂಕಿ ಬೀಳುತ್ತಿದ್ದು, ಇದಕ್ಕೆ ಶಾಸ್ವತ ಪರಿಹಾರ ಒದಗಿಸುವಂತೆ ಸ್ಥಳೀಯ ನಿವಾಸಿಗಳು ನಿರಂತರವಾಗಿ ಪಾಲಿಕೆ ಒತ್ತಾಯಿಸುತ್ತಿದ್ದಾರೆ.
