Belagavi

18 ತಾಸು ನಿದ್ದೆ ಮಾಡಿದರೆ ಅಭಿವೃದ್ಧಿ ಹೇಗಾಗುತ್ತೆ? ಲಕ್ಷ್ಮಣ ಸವದಿ ಖಡಕ್ ಮಾತು

Share

ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಜನರ ಇಚ್ಛಾಶಕ್ತಿ ಮತ್ತು ಹೋರಾಟದ ಕೊರತೆಯ ಬಗ್ಗೆ ಸಚಿವ ಲಕ್ಷ್ಮಣ ಸವದಿ ನೇರ ಮಾತುಗಳನ್ನಾಡಿದ್ದಾರೆ. 18 ತಾಸು ನಿದ್ದೆ ಮಾಡಿದರೆ ಅಭಿವೃದ್ಧಿ ಹೇಗಾಗುತ್ತೆ? ಎಂದು ಬಾಲಚಂದ್ರ ಜಾರಕಿಹೊಳಿಗೆ ಪರೋಕ್ಷವಾಗಿ ಸಚಿವ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, ಕೇವಲ ಒಂದು ಕಡೆ ಅಭಿವೃದ್ಧಿ ಆಗುತ್ತಿದೆ, ಮತ್ತೊಂದು ಕಡೆ ಆಗುತ್ತಿಲ್ಲ ಎನ್ನುವುದರಲ್ಲಿ ರಾಜಕೀಯ ವೈಫಲ್ಯವೂ ಅಡಗಿದೆ ಎಂದು ಹೇಳಿದರು. ನಮ್ಮ ಭಾಗದ ಜನರು ಇಚ್ಛಾಶಕ್ತಿ ತೋರಿಸಿ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು; ಊಟ ಮಾಡಿ 18 ತಾಸು ಮಲಗಿದರೆ ಅಥವಾ ಬೆಂಗಳೂರಿಗೆ ಹೋಗುವಷ್ಟರಲ್ಲಿ ಕೆಲಸ ಮುಗಿದರೆ ಏನೂ ಪ್ರಯೋಜನವಿಲ್ಲ, ಹಗಲು-ರಾತ್ರಿ ದುಡಿಯಲು ಮತ್ತು ಜಾಗೃತರಾಗಲು ನಾವು ಸಿದ್ಧವಾಗಬೇಕು ಎಂದು ಕರೆ ನೀಡಿದರು.

ರಾಜ್ಯದ 31 ಜಿಲ್ಲೆಗಳಲ್ಲಿ ಸದ್ಯ 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮೈಸೂರು–ಚಾಮರಾಜನಗರ, ಚಿಕ್ಕಬಳ್ಳಾಪುರ–ಕೋಲಾರ, ಉಡುಪಿ–ಮಂಗಳೂರು ಹಾಗೂ ರಾಯಚೂರು–ಕೊಪ್ಪಳ ಸೇರಿದಂತೆ ಕೆಲವು ಕಡೆ ಎರಡು ಜಿಲ್ಲೆಗಳಿಗೆ ಒಂದೇ ಬ್ಯಾಂಕ್ ಇರುವುದನ್ನು ಅವರು ಉಲ್ಲೇಖಿಸಿದರು. ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಿಯೇ ವಿಭಜನೆ ಮಾಡಲಾಗುವುದು ಎಂದ ಅವರು, ಮೊದಲ ಹಂತದಲ್ಲಿ ಹಳೇ ಧಾರವಾಡ ವ್ಯಾಪ್ತಿಯಲ್ಲಿ ಹಾವೇರಿಗೆ ಪ್ರತ್ಯೇಕ ಬ್ಯಾಂಕ್ ರಚಿಸಿ, ಕೇವಲ ನಾಲ್ಕು ವಿಧಾನಸಭಾ ಕ್ಷೇತ್ರಗಳಿರುವ ಸಣ್ಣ ಜಿಲ್ಲೆ ಗದಗವನ್ನು ಧಾರವಾಡದೊಂದಿಗೇ ಉಳಿಸಲಾಗುವುದು; ಬಳಿಕ ರಾಯಚೂರು–ಕೊಪ್ಪಳ ವಿಭಜಿಸಿ ಕೊಪ್ಪಳಕ್ಕೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸಿ, ಅದಕ್ಕೆ ಅರ್ಧದಷ್ಟು ಪಾಲು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

Tags:

error: Content is protected !!