( ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದ ಆರತಿ ಸೇವಾ ಕಾರ್ಯಕ್ರಮ)
•ಭಾರತೀಯ ಪರಮ ಶ್ರೇಷ್ಠ ಸಂಸ್ಕೃತಿಯನ್ನು ವಿಶ್ವವೇ ಅನುಕರಿಸುತ್ತಿದ್ದು, ಇದು ನಮ್ಮ ನೆಲದ ಅನುಭಾವಿಕರ, ದಾರ್ಶನಿಕರ, ತ್ಯಾಗಿಗಳ, ಯೋಗಿಗಳ, ತಪಸ್ವಿಗಳ ಮಹಾನ ತಪಸ್ಸೇ ಕಾರಣ. ರಾಮ ಭಕ್ತ ಹನುಮಂತನ ನಿತ್ಯ ಪಠನೆಯಿಂದ ಜನ್ಮ ಪಾವನ್ಗೊಳ್ಳುವದು ಎಂದು ವಿ ಹಿಂ ಪ ಹುಬ್ಬಳ್ಳಿ ಕೇಂದ್ರದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಕೆ ಗೋವರ್ಧನರಾವ್ ಹೇಳಿದರು.
ಅವರು ಶನಿವಾರ ಬೆಳಗಾವಿ ರಾಮತೀರ್ಥನಗರದ ಸುಪ್ರಸಿದ್ಧ ಶ್ರೀ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಜರುಗಿದ ಹನುಮಾನ ಚಾಳೀಸಾ ಪಠನೆ ಮತ್ತು ಆರತಿ ಸೇವಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ವಾಮಿಗೆ ಆರತಿ ಸೇವೆ ಸಲ್ಲಿಸಿ ಸದ್ಭಕ್ತರನ್ನುದ್ದೇಶಿಸಿ ಮಾತನಾಡಿದರು. ನಮ್ಮ ನೆಲದ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಇಲ್ಲಿಯ ವಿಶ್ವ ಪ್ರಸಿದ್ದ ದೇವಸ್ಥಾನಗಳು, ಮಠ, ಮಂದಿರಗಳು, ಪ್ರಾರ್ಥನಾ ಮಂದಿರಗಳು, ಇಂದಿಗೂ ಜಗತ್ತನ್ನೇ ಆಕರ್ಷಿಸುತ್ತಿವೆ. ಇದು ನಮ್ಮೆಲ್ಲರ ಹೆಮ್ಮೆ ಮತ್ತು ಅಭಿಮಾನ. ನಾವು ಹನುಮಂತನಂತೆ ಶ್ರೀಮಂತ ಸಂಸ್ಕಾರ ಗಟ್ಟಿಗೊಳಿಸಿಕೊಂಡು, ಜನ್ಮ ಸಾರ್ಥಕಕ್ಕೆ ಮುಂದಾಗಬೇಕು. ಪ್ರತಿಯೊಬ್ಬರಲ್ಲೂ ನಾಡು ನುಡಿಯ ಹೆಮ್ಮೆ ಇರಬೇಕು. ಮಕ್ಕಳಿಗೆ ದೇವಸ್ಥಾನಗಳಲ್ಲಿ ಭಕ್ತಿ, ಭಾವನೆಗಳ ಸಂಸ್ಕೃತಿ ಹೆಚ್ಚಿಸುವಲ್ಲಿ ಹೆಜ್ಜೆ ಹಾಕಬೇಕು ಎಂದರಲ್ಲದೆ,ಸನ್ಮಾನಿಸಿದ ದೇವಸ್ಥಾನದ ಆಡಳಿತ ಮಂಡಳಿಗೆ ಧನ್ಯವಾದ ಹೇಳಿದರು. ಬಿಜೆಪಿ ಧುರೀಣ, ಮದನಕುಮಾರ ಭೈರಪ್ಪನವರ ವೇದಿಕೆಯಲ್ಲಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೇವಸ್ಥಾನದ ಅಭಿವ್ರದ್ಧಿಗೆ ೧೦,೦೦೧ ರೂ ದೇಣಿಗೆ ಸಲ್ಲಿಸಿದ ರಾಮತೀರ್ಥನಗರ ದ ಸದ್ಭಕ್ತರಾದ ದತ್ತಾತ್ರೇಯ ಗಣಪತಿ ಭಟ್
ಮತ್ತು ಅವರ ಪರಿವಾರದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿ ಹಿಂ ಪ ಬೆಳಗಾವಿ ಮಹಾನಗರ ಅಧ್ಯಕ್ಷ, ಆನಂದ ಕರಲಿಂಗನ್ನವರ ಪ್ರಾಸ್ಥಾವಿಕ ವಿ ಹಿಂ ಪ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷರಾದ ಎಸ್ ಜಿ ಕಲ್ಯಾಣಿ ಅದ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ ಪಾಟೀಲ ಸ್ವಾಗತಿಸಿದರಲ್ಲದೆ, ಗಣ್ಯರನ್ನು ಕಮಿಟಿ ಪರ ಸನ್ಮಾನಿಸಿ

ಗೌರವಿಸಿದರು.ಕಾರ್ಯಕ್ರಮದಲ್ಲಿ ಕಮಿಟಿ ಶಿವಾನಂದ ಮಠಪತಿ, ಎನ್ ಬಿ ಹಣ್ಣಿಕೇರಿ, ಸಿ ಎಸ್ ಖನಗನ್ನಿ, ಬಸವರಾಜ ಹಿರೇಮಠ, ಎಸ್ ಎಲ್ ಸನದಿ, ಸಂತೋಷ ಸನದಿ, ಗುರುಸಂಗಪ್ಪಾ ಚೆಳಗೇರಿ, ಜೆ ಜಿ ಹುಣ್ಣೂರ, ಅರ್ಚಕ, ಪ್ರಕಾಶ ದಿಕ್ಷಿತ್, ಮಲ್ಹಾರ ದಿಕ್ಷಿತ್, ವಿ ಹಿಂ ಪ ಸದಸ್ಯರು ಸೇರಿದಂತೆ ಮಹಿಳೆಯರು ಮಕ್ಕಳು ಉಪಸ್ತಿತರಿದ್ದರು. ಪ್ರೊ ಎ ಕೆ ಪಾಟೀಲ ನಿರೂಪಿಸಿದರಲ್ಲದೆ ವಂದಿಸಿದರು.
