Belagavi

ಸಕ್ಕರೆ ಕಾರ್ಖಾನೆಗಳು ರೈತ ನಾಯಕರನ್ನು ಮುಗಿಸುವ ಹುನ್ನಾರ ನಡೆಸಿವೆಯೇ? ಕಿಸನ್ ನಂದಿ ಪ್ರಶ್ನೆ

Share

ಸಕ್ಕರೆ ಕಾರ್ಖಾನೆ ಮಾಲೀಕರ ಧೋರಣೆ ಹಾಗೂ ಕಬ್ಬಿನ ದರ ನಿಗದಿ ವಿಚಾರವಾಗಿ ರೈತ ಮುಖಂಡ ಕಿಸನ್ ನಂದಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಕ್ಕರೆ ಬೆಲೆ ಹೆಚ್ಚಾಗಿದ್ದರೂ ಕಾರ್ಖಾನೆಗಳು ರೈತರಿಗೆ ನ್ಯಾಯಯುತ ಬೆಲೆ ನೀಡದೆ, ರಿಕವರಿ ಪ್ರಮಾಣವನ್ನು ಕಡಿಮೆ ತೋರಿಸಿ ವಂಚಿಸುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಕಬ್ಬಿನ ದರ ನಿಗದಿ ವಿಚಾರವಾಗಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತ ಮುಖಂಡ ಕಿಸನ್ ನಂದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ 5,500 ರೂಪಾಯಿ ದರ ಕೇಳಿದಾಗ ಕಾರ್ಖಾನೆ ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಮಾಲೀಕರು, ಜಿಲ್ಲಾಧಿಕಾರಿಗಳು ಮತ್ತು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಭೆಯಲ್ಲಿ 3,600 ರೂಪಾಯಿ ದರ ನಿಗದಿಯಾದ ಬಳಿಕ ಈಗ ತಮ್ಮಿಷ್ಟಕ್ಕೆ 3,800 ರಿಂದ 4,000 ರೂಪಾಯಿ ನೀಡುವುದಾಗಿ ಹೇಳುತ್ತಿರುವುದು ರೈತ ನಾಯಕರನ್ನು ಮುಗಿಸುವ ಹುನ್ನಾರವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 55 ರೂಪಾಯಿ ದಾಟಿದ್ದರೂ, ಅಧಿಕೃತ ಪತ್ರದಲ್ಲಿ 4,200 ರಿಂದ 4,350 ರೂಪಾಯಿ ದರವನ್ನು ನಮೂದಿಸದೇ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದಿರುವ ಅವರು, ದೇಶದಲ್ಲೇ ಕಬ್ಬು ಬೆಳೆಯುವುದರಲ್ಲಿ ಬೆಳಗಾವಿ ಎರಡನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 11.73 ರಷ್ಟು ಅಧಿಕೃತ ರಿಕವರಿ ಇದ್ದರೂ ಕಾರ್ಖಾನೆಗಳು ತಮ್ಮದೇ ಲ್ಯಾಬ್‌ಗಳ ಮೂಲಕ ಇಳುವರಿಯನ್ನು ಬೇಕಂತಲೇ ಕಡಿಮೆ ತೋರಿಸಿ ರೈತರಿಗೆ ವಂಚಿಸುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Tags:

error: Content is protected !!