Belagavi

ಸೋಮವಾರ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಕಾರ್ತಿಕ ಸ್ವಾಮಿ ದರ್ಶನೋತ್ಸವ; ವರ್ಷಕ್ಕೊಮ್ಮೆ ಸಿಗುವ ಅಪರೂಪದ ಅವಕಾಶ!

Share

ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಕಪಿಲೇಶ್ವರ ಮಂದಿರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಕಾರ್ತಿಕ ಸ್ವಾಮಿ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಕಾರ್ತಿಕ ಹುಣ್ಣಿಮೆ ಹಾಗೂ ಕೃತ್ತಿಕಾ ನಕ್ಷತ್ರದ ಶುಭ ಯೋಗದಲ್ಲಿ ಭಕ್ತರಿಗೆ ಸ್ವಾಮಿಯ ದರ್ಶನ ಭಾಗ್ಯ ಸಿಗಲಿದ್ದು, ಮಂದಿರದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ಬೆಳಗಾವಿಯ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಕಾರ್ತಿಕ ಸ್ವಾಮಿ ದರ್ಶನ ನಿಮಿತ್ತ ಭವ್ಯ ದರ್ಶನೋತ್ಸವವನ್ನು ಆಯೋಜಿಸಲಾಗಿದೆ. ನವೆಂಬರ್ 23 ಸೋಮವಾರ ತಡರಾತ್ರಿ (ಉತ್ತರ ರಾತ್ರಿ) 2 ಗಂಟೆ 15 ನಿಮಿಷಕ್ಕೆ ದರ್ಶನ ಆರಂಭವಾಗಲಿದ್ದು, ನವೆಂಬರ್ 24 ಮಂಗಳವಾರ ರಾತ್ರಿ 8 ಗಂಟೆ 23 ನಿಮಿಷದವರೆಗೆ ನಿರಂತರವಾಗಿ ದರ್ಶನಕ್ಕೆ ಅವಕಾಶವಿರಲಿದೆ. ಮಂಗಳವಾರ ರಾತ್ರಿ 8.23ಕ್ಕೆ ವಿಶೇಷ ಮಹಾ ಆರತಿ ನೆರವೇರಿಸಿ ಕಾರ್ತಿಕ ಸ್ವಾಮಿ ಮಂದಿರದ ಬಾಗಿಲನ್ನು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು ಕೃತ್ತಿಕಾ ನಕ್ಷತ್ರ ಕೂಡಿಬರುವ ಈ ಪವಿತ್ರ ದಿನದಂದು ಸ್ವಾಮಿಗೆ ವಿಶೇಷ ಅಭಿಷೇಕ ನಡೆಯಲಿದ್ದು, ವರ್ಷಕ್ಕೊಮ್ಮೆ ಮಾತ್ರ ಸಿಗುವ ಈ ಅಪರೂಪದ ದರ್ಶನ ಯೋಗದ ಲಾಭವನ್ನು ವಿಶೇಷವಾಗಿ ಮಹಿಳೆಯರು ಸೇರಿದಂತೆ ಎಲ್ಲಾ ಭಕ್ತಾದಿಗಳು ಪಡೆದುಕೊಳ್ಳಬೇಕೆಂದು ಶ್ರೀ ಕಪಿಲೇಶ್ವರ ಮಹಾದೇವ ಟ್ರಸ್ಟ್ ವತಿಯಿಂದ ಆಮಂತ್ರಣ ನೀಡಲಾಗಿದೆ.

Tags:

error: Content is protected !!