Belagavi

ಬೆಳಗಾವಿ: SSLC ಫಲಿತಾಂಶ ಹೆಚ್ಚಳಕ್ಕೆ ಮರಾಠಾ ಮಂಡಳದಲ್ಲಿ ಮರಾಠಿ ವಿಷಯ ಕಾರ್ಯಾಗಾರ

Share

ಬೆಳಗಾವಿ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾಡಲು ವಿವಿಧ ವಿಷಯಗಳ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಮರಾಠಿ ವಿಷಯದ ವಿಶೇಷ ಕಾರ್ಯಾಗಾರವು ಗುರುವಾರ ಚವ್ಹಾಟ್ ಗಲ್ಲಿಯ ಮರಾಠಾ ಮಂಡಳ ಹೈಸ್ಕೂಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದ ಮರಾಠಿ ಭಾಷಾ ಶಿಕ್ಷಕರು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚಿಸುವುದು, ಪ್ರಶ್ನೆ ಪತ್ರಿಕೆ ಬಿಡಿಸುವ ತಂತ್ರ, ಪತ್ರಲೇಖನ ಹಾಗೂ ಪ್ರಬಂಧ ಬರವಣಿಗೆಯ ತಯಾರಿ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬೆಳಗುಂದಿ ಹೈಸ್ಕೂಲ್‌ನ ಶಿಕ್ಷಕ ಬಿ. ಎಂ. ಪಾಟೀಲ್, ಮರಾಠಾ ಮಂಡಳ ಹೊನಗಾ ಹೈಸ್ಕೂಲ್‌ನ ವೈ. ಎಫ್. ಪಾಟೀಲ್ ಮತ್ತು ಸಾಂಬ್ರಾ ಜನತಾ ಹೈಸ್ಕೂಲ್‌ನ ಪಿ. ಎಲ್. ಪಾಟೀಲ್ ಮಾರ್ಗದರ್ಶನ ನೀಡಿದರು. ಬೆಳಗಾವಿ ನಗರ ಇಸಿಒ ಎ. ಎಚ್. ಯೆಳೂರಕರ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ‘ಮಿಷನ್ 60+’ ಯೋಜನೆಯಡಿ ವಿಶೇಷ ತಯಾರಿ ನಡೆಸಿ, ಯಾವುದೇ ಒತ್ತಡವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವಂತೆ ಹಾಗೂ ಉತ್ತಮ ಸಂಸ್ಕಾರ ಬೆಳೆಸುವಂತೆ ಶಿಕ್ಷಕರಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಠಾ ಮಂಡಳ ಹೈಸ್ಕೂಲ್ ಮುಖ್ಯೋಪಾಧ್ಯಾಯ ಎಂ. ಕೆ. ಪಾಟೀಲ್ ವಹಿಸಿದ್ದು, ಗ್ರಾಮೀಣ ಇಸಿಒ ಎಸ್. ಎ. ಅಂಕೊಳಗಿ, ಬೆಳಗಾವಿ ಫೋರಂ ಅಧ್ಯಕ್ಷ ಸಂಜಯ ನರೇವಾಡಕರ, ಗಾಂಧಿನಗರ ಸಿಆರ್‌ಪಿ ಗಾನಗೇರ , ಹಿರಿಯ ಶಿಕ್ಷಕಿ ಸಾತೇರಿ , ಸೆಂಟ್ರಲ್ ಹೈಸ್ಕೂಲ್ ಮುಖ್ಯೋಪಾಧ್ಯಾಯ ಬಿ. ಎಂ. ಪಾಟೀಲ್, ಜಿಜಾಮಾತಾ ಮುಖ್ಯೋಪಾಧ್ಯಾಯಿನಿ ಎಲ್. ಬಿ. ಜಾಧವ್, ಎಂ. ಎಸ್. ಸಂಭಾಜಿ
ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!