Belagavi

ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗೆ ಸಜ್ಜಾದ ಬೆಳಗಾವಿ: 1200ಕ್ಕೂ ಹೆಚ್ಚು ಸ್ಪರ್ಧಾಳುಗಳ ಸಮಾಗಮ!

Share

ಬೆಳಗಾವಿಯ ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ನವೆಂಬರ್ 16 ರಿಂದ 18 ರವರೆಗೆ ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳ ಸಾವಿರಾರು ಕ್ರೀಡಾಪಟುಗಳು ಪಾಲ್ಗೊಳ್ಳಲಿರುವ ಈ ಐತಿಹಾಸಿಕ ಕ್ರೀಡಾಕೂಟದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಬೆಳಗಾವಿಯ ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್, ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ ಸಹಯೋಗದಲ್ಲಿ ನವೆಂಬರ್ 16 ರಿಂದ 18 ರವರೆಗೆ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ಅಂತರರಾಷ್ಟ್ರೀಯ ಸ್ಕೇಟಿಂಗ್ ರಿಂಕ್ ಹಾಗೂ ಬಿಎಸ್‌ಎನ್‌ಎಲ್ ಆಫೀಸ್ ರಸ್ತೆಯಲ್ಲಿ ಸಿಬಿಎಸ್‌ಇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆ ಜರುಗಲಿದ್ದು, ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಗಲ್ಫ್‌ನ 7 ದೇಶಗಳ ದುಬೈ, ಸೌದಿ ಅರೇಬಿಯಾ, ಒಮಾನ್, ಕತಾರ್, ಯುಎಇ, ಬಹ್ರೇನ್, ಶಾರ್ಜಾ, ಯೆಮೆನ್ ಮತ್ತು ಕುವೈತ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸುಮಾರು 1200ಕ್ಕೂ ಅಧಿಕ ಟಾಪ್ ಸ್ಕೇಟಿಂಗ್ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಈ ಮಹತ್ವದ ಕ್ರೀಡಾಕೂಟದ ಸಿದ್ಧತೆಗಳನ್ನು ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮಂಜಿತ್ ಜೈನ್ ಪೂರ್ಣಗೊಳಿಸಿದ್ದು, ಸ್ಪರ್ಧೆಯ ಯಶಸ್ಸಿಗಾಗಿ 20 ಅಫಿಷಿಯಲ್‌ಗಳು, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ 15 ತರಬೇತುದಾರರು, ಶಾಲೆಯ 20 ಶಿಕ್ಷಕರು, 2 ವೈದ್ಯರು ಹಾಗೂ 12 ಜನರ ಬೆಂಬಲ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಸ್ಕೇಟಿಂಗ್ ತರಬೇತುದಾರರಾದ ಸೂರ್ಯಕಾಂತ ಹಿಂದಲಗೆಕರ್, ನಿಖಿಲ್ ಚಿಂಡಕ, ವಿಶ್ವನಾಥ ಯೆಳೂರಕರ್, ಯೋಗೇಶ್ ಕುಲಕರ್ಣಿ, ವಿಠ್ಠಲ್ ಗಂಗಣೆ, ಸೋಹಮ್ ಹಿಂದಲಗೆಕರ್, ಸ್ವರೂಪ್ ಪಾಟೀಲ್, ಶಲ್ಯ ತಾರಳೇಕರ್ ಸೇರಿದಂತೆ ಬಿರ್ಲಾ ಇಂಟರ್‌ನ್ಯಾಷನಲ್ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವಿಶೇಷ ಪರಿಶ್ರಮ ವಹಿಸುತ್ತಿದ್ದಾರೆ.

Tags:

error: Content is protected !!