Belagavi

ಬಸ್ಸಾಪುರ: ರೈತ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ರೈತ; ಆಸ್ಪತ್ರೆಗೆ ದಾಖಲು!

Share

ಬಸ್ಸಾಪುರದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ವೇಳೆ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಹೋರಾಟದ ಮಧ್ಯೆಯೇ ಓರ್ವ ರೈತರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಸಹೋದ್ಯೋಗಿ ರೈತರು ಹಾಗೂ ಪೊಲೀಸರು ಆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಆಸ್ಪತ್ರೆ ಎದುರು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಸ್ಸಾಪುರ ಗ್ರಾಮದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ನಿರಂತರ ಹೋರಾಟದ ಸ್ಥಳದಲ್ಲಿ ಇಂದು (ನವೆಂಬರ್ 5) ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವೇಳೆ, ಮುಂಚೂಣಿಯಲ್ಲಿದ್ದ ಹಿರಿಯ ರೈತರೊಬ್ಬರ ಆರೋಗ್ಯದಲ್ಲಿ ಏಕಾಏಕಿ ಹಠಾತ್ ಏರುಪೇರಾಗಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದನ್ನು ಕಂಡ ಕೂಡಲೇ ಆಘಾತಗೊಂಡ ಇತರ ಪ್ರತಿಭಟನಾಕಾರರು ಮತ್ತು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿದ್ದಾರೆ.

Tags:

error: Content is protected !!