ಮನೆಯೊಂದರಲ್ಲಿ ಏಕಾಏಕಿಯಾಗಿ ಫ್ರಿಡ್ಜ್ ಸ್ಫೋಟಗೊಂಡಿದ್ದು, ಫ್ರಿಡ್ಜ್ನಲ್ಲಿ ಇಟ್ಟಿದ್ದ ಅನೇಕ ವಸ್ತುಗಳು ಹಾಳಾದ ಘಟನೆ ಧಾರವಾಡ ನಗರದ ಹಾವೇರಿಪೇಟ ಬಡಾವಣೆಯಲ್ಲಿ ನಡೆದಿದೆ.
ಬಸವರಾಜ ಹಡಗಲಿ ಎಂಬುವವರ ಮನೆಯ ಫ್ರಿಡ್ಜ್ ಸ್ಫೋಟಗೊಂಡಿದೆ. ಮನೆಯಲ್ಲಿನ ಅನೇಕ ಸಾಮಾನುಗಳು ಭಸ್ಮವಾಗಿವೆ. ಬಸವರಾಜ ಅವರು ವೃತ್ತಿಯಲ್ಲಿ ಕೇಟರಿಂಗ್ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಾಗ ಈ ಘಟನೆ ನಡೆದಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಇನ್ನು ಸ್ಫೋಟಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಘಟನೆ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
