ಬೆಳಗಾವಿಯ ಗೃಹಾಲಂಕಾರ ಪ್ರಿಯರಿಗೆ ಇದೋ ಒಂದು ಭರ್ಜರಿ ಗುಡ್ ನ್ಯೂಸ್! ಹುಬ್ಬಳ್ಳಿ ಹಾಗೂ ಧಾರವಾಡದ ಯಶಸ್ಸಿನ ಬಳಿಕ, ಹೆಸರಾಂತ ‘ಮಾಂಡೋವಿ ಫರ್ನಿಚರ್ಸ್ ಅಂಡ್ ಇಂಟೀರಿಯರ್ಸ್’ ಸಂಸ್ಥೆಯ ಮೂರನೇ ನೂತನ ಬೃಹತ್ ಶೋರೂಮ್ ಈಗ ನಮ್ಮ ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ.

ಬೆಳಗಾವಿಯ ಬಾಕ್ಸೈಟ್ ರೋಡ್‌ನ ಬಸವ ಕಾಲನಿಯಲ್ಲಿ ನೂತನವಾಗಿ ಆರಂಭವಾಗಿರುವ ‘ಮಾಂಡೋವಿ ಫರ್ನಿಚರ್ಸ್’ ಶೋರೂಮ್ ಅನ್ನು ಸ್ಥಳೀಯ ಶಾಸಕ ಆಸೀಫ್ ಸೇಠ್ ಅವರು ಅದ್ಧೂರಿಯಾಗಿ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ರಾಜೇಶ್ ಹಾಗೂ ಅವರ ಕುಟುಂಬದವರಿಗೆ ಈ ಸುಂದರ ಮಳಿಗೆಯನ್ನು ಪ್ರಾರಂಭಿಸಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಒಳ್ಳೆಯ ಉದ್ದೇಶದಿಂದ ಆರಂಭಿಸುವ ಯಾವುದೇ ಕೆಲಸಕ್ಕೂ ದೇವರ ಆಶೀರ್ವಾದ ಸದಾ ಇರುತ್ತದೆ ಎಂದು ನುಡಿದ ಶಾಸಕರು, ಬೆಳಗಾವಿ ನಗರಕ್ಕೆ ಇಂತಹ ಅತ್ಯಾಕರ್ಷಕ ಶೋರೂಮ್‌ನ ಅತ್ಯವಶ್ಯಕತೆ ಇತ್ತು ಎಂದು ಅಭಿಪ್ರಾಯಪಟ್ಟರು. ಈ ಮಳಿಗೆಯು ಕೇವಲ ಫರ್ನಿಚರ್ ಸ್ಟೋರ್ ಮಾತ್ರವಲ್ಲದೆ, ನಗರದ ಜನರು ತಮ್ಮ ಮನೆಗಳು ಹಾಗೂ ಕಚೇರಿಗಳನ್ನು ಅತ್ಯಂತ ಆಕರ್ಷಕವಾಗಿ ಸುಂದರಗೊಳಿಸಲು ಬಹಳಷ್ಟು ಸಹಕಾರಿಯಾಗಲಿದ್ದು, ಎಲ್ಲರೂ ಭೇಟಿ ನೀಡಿ ಇದರ ಸೌಲಭ್ಯ ಪಡೆಯುವಂತೆ ತಿಳಿಸಿ ಸಂಸ್ಥೆಯ ಮುಂದಿನ ಯಶಸ್ಸಿಗಾಗಿ ಶುಭ ಹಾರೈಸಿದರು.

ಸಂಸ್ಥೆಯ ಸಂಸ್ಥಾಪಕ ರಾಜು ರಾವ್ ಮಾತನಾಡಿ, 1971ರಿಂದ ಆರಂಭವಾಗಿರುವ ನಮ್ಮ ಸಂಸ್ಥೆಯು ಹುಬ್ಬಳ್ಳಿ ಹಾಗೂ ಧಾರವಾಡದ ನಂತರ ಈಗ ಬೆಳಗಾವಿಗೂ ಕಾಲಿಟ್ಟಿದೆ. ಸ್ವಂತ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ರೊಡಕ್ಷನ್ ಮೂಲಕ ಮಾಡ್ಯುಲರ್ ಕಿಚನ್, ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್‌ಗಳು, ಕಾಟ್‌ಗಳು, ಮ್ಯಾಟ್ರಿಸಸ್, ಆಫೀಸ್ ಫರ್ನಿಚರ್ಸ್ ಹಾಗೂ ಪ್ರಮುಖವಾಗಿ ಪ್ರೀಮಿಯಂ ಟೀಕ್ ವುಡ್ ಸೇರಿದಂತೆ ಗೃಹೋಪಯೋಗಿ ಸಕಲ ಫರ್ನಿಚರ್ ವಸ್ತುಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಹಾಗೂ ಅತ್ಯಂತ ರೀಸನಬಲ್ ರೇಂಜ್‌ನಲ್ಲಿ ಗ್ರಾಹಕರಿಗೆ ಒದಗಿಸುತ್ತಿದ್ದೇವೆ ಎಂದರು.

ಶೋರೂಮ್‌ನ ಡೈರೆಕ್ಟರ್ ಅರುಣ್ ರಾವ್ ಮಾತನಾಡಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲೇ ಸ್ವಂತ ಫ್ಯಾಕ್ಟರಿಯನ್ನು ಹೊಂದಿದ್ದು, 1971ರಿಂದ ಮೂರನೇ ತಲೆಮಾರಿನ ಈ ವ್ಯವಹಾರವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ಇದೀಗ ಬೆಳಗಾವಿಯ ಜನತೆಗೆ ಅತ್ಯುತ್ತಮ ಸೇವೆ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ನಿಮ್ಮೆಲ್ಲರ ಬೆಂಬಲದೊಂದಿಗೆ ನೀಡುವುದಾಗಿ ತಿಳಿಸಿದರು.

ಡೈರೆಕ್ಟರ್ ಪವನಾ ರಾವ್ ಮಾತನಾಡಿ, ನಮ್ಮಲ್ಲಿ ಕೇವಲ ಫರ್ನಿಚರ್‌ಗಳು ಮಾತ್ರವಲ್ಲದೆ ನಿಮ್ಮ ಎಲ್ಲಾ ಫರ್ನಿಚರ್ ಹಾಗೂ ಇಂಟೀರಿಯರ್ಸ್ ಅವಶ್ಯಕತೆಗಳಿಗೆ ಇದೊಂದು ಒನ್ ಪಾಯಿಂಟ್ ಸೊಲ್ಯೂಷನ್ ಆಗಿದ್ದು, ಮಾಡ್ಯುಲರ್ ಕಿಚನ್ ಮತ್ತು ವಾರ್ಡ್ರೋಬ್‌ಗಳು ಸೇರಿದಂತೆ ಸಕಲ ವಸ್ತುಗಳು ಲಭ್ಯವಿವೆ ಎಂದರು.
ಸ್ವಂತ ಫ್ಯಾಕ್ಟರಿಯನ್ನು ಹೊಂದಿರುವ ನಾವು ಡಿಸೈನಿಂಗ್‌ನಿಂದ ಹಿಡಿದು ಸಂಪೂರ್ಣ ಎಕ್ಸಿಕ್ಯೂಷನ್ ವರೆಗಿನ ಎಲ್ಲಾ ಇಂಟೀರಿಯರ್ ಕೆಲಸಗಳನ್ನು ಮಾಡಿಕೊಡಲಿದ್ದು, ಗ್ರಾಹಕರು ಶೋರೂಮ್‌ಗೆ ಭೇಟಿ ನೀಡಿ ವೈವಿಧ್ಯಮಯ ಉತ್ಪನ್ನಗಳನ್ನು ಕಣ್ಣಾರೆ ಕಂಡು ಅನುಭವಿಸುವಂತೆ ಮನವಿ ಮಾಡಿದರು. ಹುಬ್ಬಳ್ಳಿ-ಧಾರವಾಡದ ಬಳಿಕ ಬೆಳಗಾವಿಗೆ ಕಾಲಿಟ್ಟಿರುವ ಈ ಶೋರೂಮ್‌ನಲ್ಲಿ ಎಂಪ್ಟಿ ಸ್ಪೇಸ್ ಕೊಟ್ಟರೆ ಟರ್ನ್-ಕೀ ಪ್ರಾಜೆಕ್ಟ್ಸ್ ಮೂಲಕ ಸಂಪೂರ್ಣ ಫರ್ನಿಶ್ಡ್ ಮನೆಗಳನ್ನು ಮಾಡಿಕೊಡಲಾಗುತ್ತಿದ್ದು, ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಲು ಎಲ್ಲರೂ ಭೇಟಿ ನೀಡುವಂತೆ ಮಾಲೀಕರು ಆಹ್ವಾನಿಸಿದ್ದಾರೆ.
