Belagavi

ಕೆ.ಇ.ಆರ್.ಸಿ ಸಭೆಯಲ್ಲಿ ವಿದ್ಯುತ್ ಸ್ವಯಂ ಪ್ರಮಾಣೀಕರಣ ಪ್ರಸ್ತಾವನೆಗೆ ತೀವ್ರ ವಿರೋಧ

Share

150 ಕೆವಿ ವರೆಗೆ ಇರುವ ಕಡಿಮೆ ಒತ್ತಡದ ವಿದ್ಯುತ್ ಸ್ಥಾಪನೆಗಳನ್ನು ಮಾಲೀಕರೇ ಪರೀಕ್ಷಿಸಿ ಸ್ವಯಂ ಪ್ರಮಾಣೀಕರಿಸುವ ಪ್ರಸ್ತಾವನೆಗೆ ಗುತ್ತಿಗೆದಾರರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಚ ಪಿ.ರವಿಕುಮಾರ‌ ಎದುರು ಆಕ್ಷೇಪ ವ್ಯಕ್ತಪಡಿಸಿದರು.


ಬುಧವಾರ ಬೆಳಗಾವಿ ಜಿಪಂ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ಕರಡು ನಿಯಮಾವಳಿಗಳ ಕುರಿತ ಸಾರ್ವಜನಿಕ ವಿಚಾರಣೆಯಲ್ಲಿ ಆಕ್ಷೇಪಣೆ ಸಲ್ಲಿಸಿದರು.
ರೈತರ ಹಾಗೂ ಗ್ರಾಹಕರ ವಿದ್ಯುತ್ ಸುರಕ್ಷತೆಯ ಹಿತದೃಷ್ಟಿಯಿಂದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಮೂಲಕ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಮುಂದುವರೆಸಬೇಕು ಎಂದು ಆಯೋಗದ ಅಧ್ಯಕ್ಷರ ಮುಂದೆ ಒತ್ತಾಯಿಸಿದರು.

ಪ್ರೇಮ ಚೌಗುಲಾ ಮಾತನಾಡಿ, 150 ಕೆವಿ ವರೆಗೆ ಮತ್ತು 650 ವಿ ಗಿಂತ ಕಡಿಮೆ ಒತ್ತಡದ ವಿದ್ಯುತ್ ಸ್ನಾಪನೆಗಳನ್ನು ಸಂಪರ್ಕ ಕೊಡುವ ಮುನ್ನ ಮಾಲೀಕರೇ ಪರಿಶೀಲಿಸಿ, ಪರೀಕ್ಷಿಸಿ ಮತ್ತು ಸ್ವಯಂ ಪ್ರಮಾಣೀಕರಿಸಬೇಕು. ನಮಗೆ ವಿದ್ಯುತ್ ಸಂಪರ್ಕ ಬೇಗ ಸಿಗಬೇಕು, ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು ಮತ್ತು ಅರ್ಜಿ ಪ್ರಕ್ರಿಯೆ ಸರಳವಾಗಬೇಕು ಎನ್ನುವುದು ನಮ್ಮ ಆಶಯ. ಆದರೆ, ಪ್ರಕ್ರಿಯೆ ಸರಳ ಮಾಡುವ ನೆಪದಲ್ಲಿ ವಿದ್ಯುತ್ ಸುರಕ್ಷತೆಯನ್ನು ನಮ್ಮಂತಹ ಸಾಮಾನ್ಯ ಗ್ರಾಹಕರ ಜವಾಬ್ದಾರಿಗೆ ಬಿಡುವುದು ಸರಿಯಲ್ಲ ಎಂದರು.

ಚೇಂಬರ್ ಆಫ್ ಕಾಮಸ್೯ನ ನಿರ್ದೇಶಕ ಪ್ರಭಾಕರ ನಾಗರಮುನವಳ್ಳಿ ಮಾತನಾಡಿ, ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ 3ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂಬ ಮಾಹಿತಿ ಇದೆ. ಆಯೋಗ ತೆಗೆದುಕೊಳ್ಳುವ ಎಲ್ಲ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೈಗಾರಿಕೆಯಲ್ಲಿ ವಿದ್ಯುತ್ ಸಮಸ್ಯೆ ಸಾಕಷ್ಟು ಆಗುತ್ತಿದೆ. ಹಳೆಯ ಪದ್ಧತಿಯಂತೆಯೇ ಮುಂದುವರೆಸಬೇಕು. ಹೊಸ ಸಾಫ್ಟ್‌ವೇರ್ ನಿಂದ ಗ್ರಾಹಕರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಮೀಟರ್ ದರದ ಬಗ್ಗೆ ಮಾಹಿತಿ ಕೇಳಿದರೂ ಹೆಸ್ಕಾಂನವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.

ಎಚ್.ಕೆ.ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!