Belagavi

ಜಿಲ್ಲಾ ಪಂಚಾಯತ್ ಸಭೆಗೂ ಮುನ್ನವೇ ಕಸದ ರಾಶಿ

Share

ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಗೆ ಸಜ್ಜಾಗಬೇಕಿದ್ದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಕಸದ ರಾಶಿ ತಾಂಡವವಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಮುಖ ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಬಾವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭಾಭವನದ ಒಳಗಡೆ ಬಿದ್ದಿದ್ದ ಕಸವನ್ನು ಸ್ವತಃ ಗುಡಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡ ರಾಜ್ಯೋತ್ಸವದ ನಿಮಿತ್ತ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಗೂ ಮುನ್ನವೇ ಅಲ್ಲಿನ ಸ್ವಚ್ಛತಾ ಕೊರತೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಬಯಲಾಗಿದೆ. ಸಭೆ ನಡೆಯುವ ಸಭಾಭವನವು ಕಸದಿಂದ ಕೂಡಿದ್ದು, ಇದನ್ನು ಗಮನಿಸಿದ ಖ್ಯಾತ ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಬಾವಿ ತೀವ್ರವಾಗಿ ಗರಂ ಆಗಿದ್ದಾರೆ. “ರಾಜ್ಯೋತ್ಸವದ ಸಭೆ ಇದ್ದರೂ ಸಭಾಭವನವನ್ನು ಸ್ವಚ್ಛಗೊಳಿಸುವುದಿಲ್ಲವೇ?” ಎಂದು ಜಿಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಒಳಗಡೆ ಬಿದ್ದಿದ್ದ ಕಸವನ್ನು ಕಚೇರಿಯ ಆವರಣದಲ್ಲೇ ತಂದು ಸುರಿಯುವ ಮೂಲಕ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಸಾರ್ವಜನಿಕ ಕಚೇರಿಯಲ್ಲಿ ನಡೆದ ಈ ದಿಢೀರ್ ಪ್ರತಿಭಟನೆಯು ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

Tags:

error: Content is protected !!