Belagavi

ಇಂದೇ ಬೇಡಿಕೆ ಈಡೇರಿಸಿದರೆ ಹೋರಾಟ ವಾಪಸ್ – ಚೂನ್ನಪ್ಪ ಪೂಜಾರಿ ಎಚ್ಚರಿಕೆ

Share

ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಹಾಗೂ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಿತ್ತೂರಿನಿಂದ ಮುನ್ನಡೆಯುತ್ತಿರುವ ಐದನೇ ದಿನದ ರೈತ ಪಾದಯಾತ್ರೆಯಲ್ಲಿ ರೈತ ಮುಖಂಡ ಚುನ್ನಪ್ಪ ಪೂಜಾರಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂದೇ ಬೇಡಿಕೆ ಈಡೇರಿಸಿದರೆ ಹೋರಾಟವನ್ನು ಕೈಬಿಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಬ್ಬಿಗೆ ಎಂಎಸ್‌ಪಿ ದರವನ್ನು ಹೆಚ್ಚಿಸಬೇಕು ಹಾಗೂ ಎಥೆನಾಲ್ ಹಾಗೂ ಕಮರ್ಷಿಯಲ್ ಸಕ್ಕರೆ ಬೆಲೆ ನಿಗದಿಗೆ ಆಗ್ರಹಿಸಿ ಕಿತ್ತೂರಿನಿಂದ ಆರಂಭವಾಗಿರುವ ರೈತರ ಐದನೇ ದಿನದ ಪಾದಯಾತ್ರೆಯು ಗುಳೇದಕೊಪ್ಪದತ್ತ ಸಾಗುತ್ತಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಘೋಷಣೆ ಮಾಡಬೇಕೆಂದು ರೈತರು ಕಾತರದಿಂದ ಕಾಯುತ್ತಿದ್ದಾರೆ. ಸಂಬಂಧಪಟ್ಟ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಭರವಸೆ ನೀಡುತ್ತಿದ್ದರೂ, ಇದು ರಾಜ್ಯಾದ್ಯಂತ ಜನಾಂದೋಲನವಾಗಿ ರೂಪುಗೊಂಡಿರುವ ಚಳವಳಿಯಾಗಿರುವುದರಿಂದ ಕೇವಲ ಮೌಖಿಕ ಭರವಸೆಗಳಿಗೆ ರೈತರು ತೃಪ್ತರಾಗುವುದಿಲ್ಲ. ಮಳೆ ಮತ್ತು ವಿದ್ಯುತ್ ಇಲ್ಲದೆ ಭೀಕರ ಬರಗಾಲದ ವಾತಾವರಣವಿರುವ ಈ ಸಂದರ್ಭದಲ್ಲಿ ಕಾರ್ಖಾನೆಗಳು ತಕ್ಷಣವೇ ಆರಂಭವಾದರೆ ಬೆಳೆದ ಕಬ್ಬು ನಾಶವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಗಂಭೀರ ಪರಿಸ್ಥಿತಿ ಎದುರಾಗುತ್ತದೆ ಎಂದು ಚುನ್ನಪ್ಪ ಪೂಜಾರಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದು ಟನ್ ಕಬ್ಬು ಬೆಳೆಯಲು ಅಂದಾಜು ಐದು ಸಾವಿರದ ಐದು ನೂರು ರೂಪಾಯಿ ಖರ್ಚು ಬರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸಂಸದರು ತಕ್ಷಣವೇ ಮಧ್ಯಪ್ರವೇಶಿಸಿ ಎಂಎಸ್‌ಪಿಯನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಕಡೆಯಿಂದ ಸಚಿವರು ಖುದ್ದು ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಸೂಕ್ತ ಘೋಷಣೆ ಮಾಡದಿದ್ದರೆ, ಅಕ್ಟೋಬರ್ 22ರಂದು ಕೆರೆಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ರೈತರು ಒಟ್ಟುಗೂಡಿ ಮುಂದಿನ ಉಗ್ರ ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!