Belagavi

ಟೈರ್ ಸ್ಪೋಟ್ ; ಡಿವೈಡರ್’ಗೆ ಗುದ್ದಿದ ಕಾರು!!!

Share

ಹಿರೇಬಾಗೇವಾಡಿಯಿಂದ ಬೆಳಗಾವಿಯ ಕಡೆಗೆ ಹೊರಟಿದ್ದ ಕಾರೊಂದು ಟೈರ್ ಹಸ್ಫೋಟಗೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.


ಹಿರೇಬಾಗೇವಾಡಿಯಿಂದ ಬೆಳಗಾವಿಯ ದಿಕ್ಕಿನಲ್ಲಿ ವೇಗವಾಗಿ ತೆರಳುತ್ತಿದ್ದ ಟಾಟಾ ಕಂಪನಿಯ ಕಾರಿನ ಟೈರ್ ಹಠಾತ್ ಸ್ಪೋಟಗೊಂಡ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿದ ವಾಹನ ನೇರವಾಗಿ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಬಂದು ಭೀಕರವಾಗಿ ಅಪ್ಪಳಿಸಿದೆ. ಈ ಅಪಘಾತದಲ್ಲಿ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ. ಕಾರಿನಲ್ಲಿ ಚಾಲಕ ಮಾತ್ರ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಹೈವೆ ಪೆಟ್ರೋಲಿಂಗ್ ಸಿಬ್ಬಂದಿ ಹಾಗೂ ಹಿರೇಬಾಗೇವಾಡಿ ಠಾಣೆಯ ಪೊಲೀಸರು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಜಖಂಗೊಂಡ ವಾಹನವನ್ನು ರಸ್ತೆಯ ಬದಿಗೆ ತೆರವುಗೊಳಿಸಿದ್ದಾರೆ.

Tags:

error: Content is protected !!