Belagavi

ಕ್ರೀಡಾನಗರಿ ಬೆಳಗಾವಿಗೆ ಕೀರ್ತಿ: ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಬೆಳಗಾವಿಯ ಸರ್ವೇಶ್ ಹಾಗೂ ಕುಲದೀಪ್

Share

 

ಪಾಂಡಿಚೇರಿಯಲ್ಲಿ ನಡೆದ ಪ್ರತಿಷ್ಠಿತ ಕೇಂದ್ರ ವಿದ್ಯಾಲಯ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಯುವ ಸ್ಕೇಟರ್‌ಗಳು ತಮ್ಮ ಅದ್ಭುತ ಪ್ರತಿಭೆಯಿಂದ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿಪತಾಕೆ ಹಾರಿಸಿದ್ದಾರೆ. ಒಟ್ಟು 500ಕ್ಕೂ ಹೆಚ್ಚು ಪ್ರತಿಭಾವಂತ ಸ್ಪರ್ಧಾಳುಗಳು ಪಾಲ್ಗೊಂಡಿದ್ದ ಈ ಕಠಿಣ ಪಂದ್ಯಾವಳಿಯಲ್ಲಿ ನಮ್ಮ ಹೆಮ್ಮೆಯ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬೆಳಗಾಂ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಪ್ರತಿಭಾವಂತ ಸ್ಕೇಟರ್‌ಗಳಾದ ಸರ್ವೇಶ್ ಪಾಟೀಲ್ ಹಾಗೂ ಕುಲದೀಪ್ ಬಿರ್ಜೆ ಅವರು ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಒಟ್ಟು 3 ಚಿನ್ನ ಮತ್ತು 1 ಬೆಳ್ಳಿಯ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಅಸಾಧಾರಣ ಸಾಧನೆ ಮೆರೆದಿದ್ದಾರೆ. ಸರ್ವೇಶ್ ರೂಪೇಶ್ ಪಾಟೀಲ್ 2 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರೆ, ಕುಲದೀಪ್ ಬಿರ್ಜೆ 1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದು ಮಿಂಚಿದ್ದಾರೆ. ಕೋಚ್‌ಗಳ ಅಮೂಲ್ಯ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲವೇ ಈ ಐತಿಹಾಸಿಕ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.

ಇವರಿಗೆ ಸೂರ್ಯಕಾಂತ ಹಿಂಡಲ್ಗೇಕರ, ವಿಠ್ಠಲ್, ಸೋಹಮ್ ಹಿಂಡಲಗೇಕರ ಯೋಗೇಶ ಕುಲಕರ್ಣಿ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಯ ಸಾಧನೆಗೆ ಕೇಂದ್ರೀಯ ವಿದ್ಯಾಲಯ ವಿದ್ಯಾಲಯ ಪ್ರಾಂಶುಪಾಲ ಮಹೇಂದ್ರ ಕಲ್ರಾ, ದೈಹಿಕ ಶಿಕ್ಷಕ ಅವಿನಾಶಕುಮಾರ ಸಿಂಗ್, ಮೋಹನ ಗಾವಡೆ, ಪೂಜಾ ಮುಚ್ಚಂಡಿ ಸೇರಿದಂತೆ ವಿದ್ಯಾಲಯ ಭೋದಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ

Tags:

error: Content is protected !!