BELAGAVI

ಬೆಳಗಾವಿ: ಪೌರಕಾರ್ಮಿಕರಿಗಾಗಿ ರೋಟರಿ ಕ್ಲಬ್‌ನಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Share

ಬೆಳಗಾವಿಯ ರೋಟರಿ ಕ್ಲಬ್ ಆಫ್ ಬೆಲಗಾಮ್ ದರ್ಪಣ ಹಾಗೂ ಹ್ಯಾಪಿ ಹಾರ್ಟ್ ಫೌಂಡೇಶನ್ ಸಹಯೋಗದಲ್ಲಿ ಪೌರಕಾರ್ಮಿಕರಿಗಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಈ ಉಪಯುಕ್ತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.

ಬೆಳಗಾವಿಯಲ್ಲಿ ಪೌರಕಾರ್ಮಿಕ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಬೆಲಗಾಮ್ ದರ್ಪಣ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಿರಾಶ್ರಿತರು, ಹಾಗೂ ಪೌರ ಕಾರ್ಮಿಕರಿಗಾಗಿ ಮೆಗಾ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಬಹಳ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕ್ಲಬ್ ಅಧ್ಯಕ್ಷೆ ಆರ್.ಟಿ.ಎನ್. ಡಾ. ಸ್ಪೂರ್ತಿ ಮಾಸ್ತಿಹೋಳಿ ಅವರ ನೇತೃತ್ವದಲ್ಲಿ ಜರುಗಿದ ಈ ಜನಪರ ಕಾರ್ಯಕ್ರಮಕ್ಕೆ ಹ್ಯಾಪಿ ಹಾರ್ಟ್ ಫೌಂಡೇಶನ್ ವಿಶೇಷ ಸಾಥ್ ನೀಡಿತು.

ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ರಕ್ತಹೀನತೆ (ಅನೀಮಿಯಾ) ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸೆಯಂತಹ ಪ್ರಮುಖ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಯಿತು. ಕಾರ್ಮಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷೆ ಆರ್.ಟಿ.ಎನ್. ಡಾ. ಸ್ಪೂರ್ತಿ ಮಸ್ತಿಹೋಳಿ, ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದಾಗಿದ್ದು, ಅವರ ಆರೋಗ್ಯ ಕಾಳಜಿ ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ಮಹಾಪೌರ ಪ್ರೀತಿ ಕಾಮಕರ್, ಕಮಿಷ್ನರ್ ಕಾರ್ತಿಕ್ ಎಂ., ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
ಕಾರ್ಯಕ್ರಮದ ಯಶಸ್ಸಿಗೆ ರಕ್ಷಾ ಉಪಾಧ್ಯೆ, ಪುಷ್ಪ ಪರ್ವತಾರಾವ್, ಸವಿತಾ ಹೆಬ್ಬಾರ್ ಹಾಗೂ ರಾಜ್‌ನಂದಾ ಗರ್ಗಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಶ್ರಮಿಸಿದರು.

Tags:

error: Content is protected !!