KHANAPUR

ಖೈರವಾಡದಲ್ಲಿ ಶ್ರೀ ಗಣೇಶ ದೇವಸ್ಥಾನ ಸ್ಲ್ಯಾಬ್ ಭರಣಿಗೆ ಚಾಲನೆ ನೀಡಿದ ಶಾಸಕ ವಿಠ್ಠಲ ಹಲಗೇಕರ

Share

ಖಾನಾಪೂರ ತಾಲೂಕಿನ ಖೈರವಾಡ ಗ್ರಾಮದಲ್ಲಿ ಶ್ರೀ ಗಣೇಶ ಮಂಡಳದ ವತಿಯಿಂದ ನೂತನ ದೇವಸ್ಥಾನದ ಸ್ಲ್ಯಾಬ್ ಭರಣಿ ಕಾರ್ಯಕ್ರಮವು ಅತ್ಯಂತ ಸಡಗರದಿಂದ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಪಾಲ್ಗೊಂಡು ಚಾಲನೆ ನೀಡುವ ಮೂಲಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.


ಖಾನಾಪೂರ ತಾಲೂಕಿನ ಖೈರವಾಡ (ದುರ್ಗಾ ನಗರ) ಗ್ರಾಮದ ಶ್ರೀ ಗಣೇಶ ಮಂಡಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಶ್ರೀ ಗಣೇಶ ದೇವಸ್ಥಾನದ ಸ್ಲ್ಯಾಬ್ (ಚಾವಣಿ) ಹಾಕುವ ಶುಭ ಸಮಾರಂಭಕ್ಕೆ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಅವರು ಚಾಲನೆ ನೀಡಿ, ಗಣೇಶನ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮಂಡಳದ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ಗ್ರಾಮದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ ಎಂದರು ಅಲ್ಲದೆ, ದೇವಸ್ಥಾನದ ಮುಂದಿನ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ಭರವಸೆ ನೀಡಿದರು.

Tags:

error: Content is protected !!