Belagavi

ಯಮಕನಮರಡಿಯಲ್ಲಿ ಗಣೇಶೋತ್ಸವ ಶಾಂತಿ ಸಭೆ: ಅತ್ಯುತ್ತಮ ಮಂಡಳಿಗಳಿಗೆ ಪೊಲೀಸ್‌ ಇಲಾಖೆಯಿಂದ ಸನ್ಮಾನ!

Share

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಯಮಕನಮರಡಿ ಪೊಲೀಸ್ ಠಾಣಾ ಆವರಣದಲ್ಲಿ ಮಹತ್ವದ ಪೂರ್ವಭಾವಿ ಶಾಂತಿ ಸಭೆ ನಡೆಯಿತು. ಪಿ.ಐ ಜಾವೀದ ಮುಶಾಪುರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಂತಿಯುತ ಹಬ್ಬ ಆಚರಣೆಗೆ ಕರೆ ನೀಡಲಾಗಿದ್ದು, ನಿಯಮ ಪಾಲಿಸಿದ ಮಾದರಿ ಗಣೇಶ ಮಂಡಳಿಗಳನ್ನು ಗೌರವಿಸಲಾಯಿತು.

ಯಮಕನಮರಡಿ ಪೊಲೀಸ್ ಇನ್ಸ್‌ಪೆಕ್ಟರ್ ಜಾವೀದ ಮುಶಾಪುರೆ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಭಕ್ತಿ, ಭಾವೈಕ್ಯತೆ ಹಾಗೂ ಸೌಹಾರ್ದತೆಯಿಂದ ಆಚರಿಸಲು ಸೂಚಿಸಲಾಯಿತು. ಕೋರ್ಟ್ ಹಾಗೂ ಸರ್ಕಾರದ ನಿಯಮಗಳಂತೆ ಡಿಜೆ-ಡಿಜಿಟಲ್ ಸೌಂಡ್ ಸಿಸ್ಟಮ್ ಬಳಸದಂತೆ ಮತ್ತು ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು. ಕಳೆದ ಬಾರಿಯ ಗಣೇಶೋತ್ಸವದಲ್ಲಿ ಡಿಜೆ ಬಳಸದೆ, ಸಮಯಕ್ಕೆ ಸರಿಯಾಗಿ ವಿಸರ್ಜನೆ ಮಾಡಿ, ಕಾನೂನು ಪಾಲಿಸಿದ ಮಂಗಳ ಮೂರ್ತಿ ಗಜಾನನ ಯುವಕ ಮಂಡಲ, ಗಜಾನನ ಯುವಕ ಮಂಡಲ ಸೇರಿದಂತೆ ಒಟ್ಟು 7 ಮಾದರಿ ಗಣೇಶ ಮಂಡಳಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಜೊತೆಗೆ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಿದ ಪ್ರಮುಖರಾದ ಕರೇಪ್ಪ ಗುಡೆನ್ನವರ ಹಾಗೂ ಬಂದೂಲಾಲ್ ಮಲಿಕ್ ಪನ್ನಾರಿ ಅವರನ್ನು ಸನ್ಮಾನಿಸಲಾಯಿತು.

Tags:

error: Content is protected !!