:ಗಣೇಶೋತ್ಸವದ ಸಂಭ್ರಮದಲ್ಲಿರುವ ಭಕ್ತರಿಗೆ ಬೈಕ್ ಕೈಕೊಟ್ಟರೆ ಚಿಂತಿಸಬೇಕಿಲ್ಲ. ಬೆಳಗಾವಿ ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ಮೆಕ್ಯಾನಿಕ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ದಡ್ಡೀಕರ್ ಮುಂಚೂಣಿಯಲ್ಲಿ ನಿಂತು ಉಚಿತ ದ್ವಿಚಕ್ರ ವಾಹನ ದುರಸ್ತಿ ಸೇವೆಯನ್ನು ಯಶಸ್ವಿಯಾಗಿ ಒದಗಿಸುತ್ತಿದ್ದಾರೆ.

ಅಸೋಸಿಯೇಷನ್ ವತಿಯಿಂದ ಪ್ರಮುಖ ಐದು ವಿಭಾಗಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಧರ್ಮವೀರ ಸಂಭಾಜಿ ಮಹಾರಾಜ್ ಚೌಕ, ವಡಗಾವ್, ಗೋವಾವೇಸ್ ಸರ್ಕಲ್, ಫೋರ್ಟ್ ರೋಡ್ ಹಾಗೂ ಟಿಳಕಚೌಕ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಈ ಸೇವೆ ಲಭ್ಯವಿದೆ. ಯಾವುದೇ ಗೊಂದಲ ಉಂಟಾಗದಿರಲು ಪ್ರತಿ ವಿಭಾಗಕ್ಕೂ ಪ್ರತ್ಯೇಕ ಅಧಿಕೃತ ಸಂಪರ್ಕ ಸಂಖ್ಯೆಗಳನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ಸಂಘಟಕರು ಹಾಗೂ ಮೆಕ್ಯಾನಿಕ್ ಬಂಧುಗಳು ಒಗ್ಗಟ್ಟಿನಿಂದ ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಮಹತ್ವದ ಉಪಕ್ರಮದಲ್ಲಿ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ್ ನಿಂಬರಗಿಣಕರ್, ಉಪಾಧ್ಯಕ್ಷ ರಾಜು ರೇಡೇಕರ್, ಕಾರ್ಯದರ್ಶಿ ಮಾರುತಿ ಗುರವ, ಖಜಾಂಚಿ ಮಹೇಶ್ ಕಾಕತೀಕರ್, ಸಂಚಾಲಕರಾದ ವಿಜಯ ಶಿಂಧೆ ಹಾಗೂ ಗಿರೀಶ್ ನಾಯ್ಕ್ (ಪಿಲ್ಲು ಮಿಸ್ತ್ರಿ) ಸೇರಿದಂತೆ ಬಾಬು ಕಡಮೋಲಿ, ದತ್ತಾ ಪಾಟೀಲ್, ನಿಲೇಶ್ ಚಲಗುಡ್ಕರ್, ಪ್ರಮೋದ್ ಕಂಗ್ರಾಳಕರ್, ಸಚಿನ್ ಗವಳಿ, ರವಿ ಕಡಹಟ್ಟಿ ಮತ್ತಿತರ ಪ್ರಮುಖರು ಹಾಗೂ ಎಲ್ಲಾ ಸಹಭಾಗಿ ಮೆಕ್ಯಾನಿಕ್‌ಗಳು ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ.
