Belagavi

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆ ವಿತರಣೆ

Share

ಬೆಳಗಾವಿ ನಗರ ವಲಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಕ ಸಾಧನ-ಸಾಮಗ್ರಿಗಳನ್ನು ವಿತರಿಸಲಾಯಿತು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರು ಈ ಉಪಯುಕ್ತ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಬೆಳಗಾವಿ ನಗರ ವಲಯದ ವ್ಯಾಪ್ತಿಯಲ್ಲಿ ಸನ್ 2025-26 ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಯೋಜನೆಯಡಿಯಲ್ಲಿ ನಡೆದ ವೈದ್ಯಕೀಯ ಮೌಲ್ಯಮಾಪನ ಶಿಬಿರದಲ್ಲಿ ಆಯ್ಕೆಯಾದ, 1 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 21 ಪ್ರಕಾರದ ನ್ಯೂನ್ಯತೆಯುಳ್ಳ ಪ್ರಾಥಮಿಕ ವಿಭಾಗದ 32 ಹಾಗೂ ಪ್ರೌಢ ವಿಭಾಗದ 8 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 40 ವಿದ್ಯಾರ್ಥಿಗಳಿಗೆ ದಿನೈನಂದಿನ ಶಿಕ್ಷಣ ಕಲಿಕೆಗೆ ಅನುಕೂಲವಾಗಲೆಂದು ವಿಶೇಷ ಸಹಾಯಕ ಸಾಧನ-ಸಾಮಗ್ರಿಗಳನ್ನು ದಿನಾಂಕ 31/08/2026 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರಿಂದ ವಿತರಿಸಲಾಯಿತು.

Tags:

error: Content is protected !!