ಬೆಳಗಾವಿ ಜಿಲ್ಲೆಯ ಗಜಪತಿ ಗ್ರಾಮಕ್ಕೆ ಕರ್ನಾಟಕ ರೈತ ಸಂಘದ ರಾಜ್ಯಾದ್ಯಕ್ಷರು ಚೂನಪ್ಪ ಪೂಜಾರಿ ಬೇಟಿ ನೀಡಿ ರೈತರ ಸಮಸ್ಯೆಗಳನ್ನ ಆಲಿಸಿದರು.


ಪ್ರಸಕ್ತ ವರ್ಷದ ಸಾಲಿನಲ್ಲಿ ಕಬ್ಬಿನ ಬೆಲೆಯನ್ನ ಹೆಚ್ಚಳ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು..ರೈತರ ವಿವಿಧ ಭೆಡಿಕೆಗಳನ್ನ ರಾಜ್ಯ ಸರಕಾರ ಬಗೆ ಹರಿಸಬೇಕು ಎಂದು ಚೂನಪ್ಪ ಪೂಜಾರಿ ಮಾತನಾಡಿದ್ದಾರೆ.ಪ್ರಸಕ್ತ ವರ್ಷದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಮಾಹಿತಿ ಪಡೆದರು. ಬೆಳೆ ವೆಚ್ಚ ಹೆಚ್ಚಾಗಿರುವುದರಿಂದ ಕಬ್ಬಿಗೆ ಸೂಕ್ತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಬಗ್ಗೆ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

ಚೂನಪ್ಪ ಪೂಜಾರೆ ಗ್ರಾಮಕ್ಕೆ ಭೆಟಿ ನೀಡಿದಾಗ ಗ್ರಾಮದ ರೈತ ಮುಖಂಡರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಇನ್ನು ಗ್ರಾಮದ ಹಿರಿಯ ಮುಖಂಡರಾದ ರಮೇಶ್ ಗೌಡ್ರು ಪಾಟೀಲ,ಚಣಬಸಪ್ಪ ಲಂಗೋಟಿ, ಮಡಿವಾಶ್ವೆರ ಮಠದ ಪ್ರಶಾಂತ ಸ್ವಾಮೀಜಿ ,ಬಸವರಾಜ ಕರಡಿ ಹಾಗೂ ಯುವ ರೈತ ಹೋರಾಟಗಾರರು ಸಂಜು ಲಂಗೋಟಿ ಮತ್ತಿತರರು ಉಪಸ್ಥಿತರಿದ್ದರು…
