ಬಾಗಲಕೋಟೆ ಜಿಲ್ಲೆಯ ಮೂಧೋಳ ಮೂಲದ ಡವಲರ್ ಮಂಜುನಾಥನಿಗೆ ಆಸ್ತಿ ದಾಖಲಾತಿ ವಿಚಾರಕ್ಕೆ ಧಾರವಾಡ ತಹಶಿಲ್ದಾರ ಒಂದು ಕೋಟಿಗೆ ಡಿಮ್ಯಾಂಡ್ ಮಾಡಿ, 50ಲಕ್ಷ ಹಣ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಲರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ವಿಶೇಷ ನ್ಯಾಯಾಲಯವು ತಹಶಿಲ್ದಾರ ಸಚ್ಚಿದಾನಂದವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

ಕಳೆದ ಬುಧುವಾರ ಧಾರವಾಡ ಕೆಸಿಡಿ ಕಾಲೇಜು ಆವರಣದಲ್ಲಿ ಧಾರವಾಡ ತಹಶಿಲ್ದಾರ ಸಚ್ಚಿದಾನಂದ ಅವರು ಹಣ ಸ್ವೀಕರಿಸುವ ವೇಳೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದಿದ್ದರು. ಆಗ ಲೋಕಾಯುಕ್ತ ಪೊಲೀಸರು ಸಚ್ಚದಾನಂದವರನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಇಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಚ್ಚಿದಾನಂದ ಅವರನ್ನು ಹಾಜರುಪಡಿಸಿದ ನಂತರ ಈಗ ಸಚ್ಚಿದಾನಂದವರಿಗೆ 14 ದುನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ. ಸದ್ಯ ಈಗ ನ್ಯಾಯಾಲಯ ನ್ಯಾಯಾಂಗ ಬಂಧನ ಆದೇಶ ನೀಡಿದ ಬೆನ್ನಲ್ಲೇ ಸಚ್ಚಿದಾನಂದವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿದೆ.
