Belagavi

ಶಿವಾನಂದ ನೀಲಣ್ಣವರ್’ಗೆ 12 ದಿನ ED ಕಸ್ಟಡಿ!

Share

ಬಹುಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಪ್ರಮುಖ ಆರೋಪಿ ಶಿವಾನಂದ್‌ನನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಮತ್ತು ಲಾಭಾಂಶದ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ಬಳಿಕ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಹೂಡಿಕೆದಾರರಿಂದ ಹರಿದುಬಂದ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿರುವ ಹಾಗೂ ಅಕ್ರಮ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಕಾಯ್ದೆಯಡಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಡಿ ರಂಗಕ್ಕಿಳಿದಿತ್ತು.

ಪ್ರಕರಣದ ಕುರಿತು ವಿವರವಾದ ತನಿಖೆ ನಡೆಸಿರುವ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಪ್ರಕರಣದ ಆಳವಾದ ತನಿಖೆ, ಹಣ ರವಾನೆಯ ಮೂಲ ಮತ್ತು ಜಾಲವನ್ನು ಭೇದಿಸಲು ಆರೋಪಿಯ ವಿಚಾರಣೆ ಅಗತ್ಯವಾಗಿದೆ ಎಂದು ಇಡಿ ಪರ ವಕೀಲರು ವಾದಿಸಿದರು. ಇಡಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿದೆ.
ಕಸ್ಟಡಿ ಅವಧಿಯಲ್ಲಿ ಅಧಿಕಾರಿಗಳು ಆರೋಪಿಯಿಂದ ವಂಚನೆಯ ಸಂಪೂರ್ಣ ಜಾಲ, ಅಕ್ರಮ ಆಸ್ತಿ ಗಳಿಕೆ ಹಾಗೂ ಹೂಡಿಕೆದಾರರ ಹಣ ಎಲ್ಲಿಗೆ ತಲುಪಿದೆ ಎಂಬುದರ ಕುರಿತು ತೀವ್ರ ವಿಚಾರಣೆ ನಡೆಸಲಿದ್ದಾರೆ.

Tags:

error: Content is protected !!