Belagavi

ಹುಣಸಿಕಟ್ಟಿಯಲ್ಲಿ ಮಲಪ್ರಭಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ. ಹಬ್ಬದ ಸಂಭ್ರಮ – ವಾದ್ಯಮೇಳ, ಮೆರವಣಿಗೆ, ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರ ಭಾಗಿ ಸುದ್ದಿ

Share

ಚ.ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಗಂಗಾಂಬಿಕಾ ದೇವಸ್ಥಾನದ ಪಕ್ಕದಲ್ಲಿರುವ ಮಲಪ್ರಭಾ ನದಿಗೆ ಹುಣಶೀಕಟ್ಟಿ ಗ್ರಾಮಸ್ಥರಿಂದ ಭಕ್ತಿಭಾವದ ಬಾಗಿನ ಅರ್ಪಣೆ ಸಲ್ಲಿಸುವ ಮೂಲಕ ಧಾರ್ಮಿಕ ಸಂಪ್ರದಾಯವನ್ನು ವಿಜೃಂಭಣೆಯಿಂದ ಇಡೀ ಗ್ರಾಮವೇ ಹಬ್ಬದ ವಾತಾವರಣದಿಂದ ನಡೆಸಲಾಯಿತು.

ಬೆಳಗ್ಗಿನಿಂದಲೇ ಗಂಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನಡೆದ ಬಳಿಕ, ವಾದ್ಯಮೇಳಗಳ ಘೋಷ, ಜಯಘೋಷ ಹಾಗೂ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಭಕ್ತರು ಮಲಪ್ರಭಾ ನದಿಯ ತಟದಲ್ಲಿ ಗ್ರಾಮಸ್ಥರೊಂದಿಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರೋಹಿನಿ ಬಾಬಾಸಾಹೇಬ್ ಪಾಟೀಲ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಮಾಡಿದರು ತದನಂತರ ಮಾತನಾಡಿದ ಅವರು ಉತ್ತಮ ಮಳೆ, ಸಮೃದ್ಧ ಬೆಳೆ, ಗ್ರಾಮದ ಸುಖ–ಶಾಂತಿ ಹಾಗೂ ಜನರ ಒಳಿತಿಗಾಗಿ ಈ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಹುಣಶೀಕಟ್ಟಿ, ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ಹಿರಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಆಚರಣೆಗೆ ಮೆರುಗು ತರುವ ಮೂಲಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಿದರು.
ಇದೇ ಸಂದರ್ಭದಲ್ಲಿ ಮಲಪ್ರಭಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶಂಕರ್ ಹೊಳಿ, ಕುಮಾರ ನಾಡಗೌಡ್ರು, ನಾಗಪ್ಪ ಮುರ್ಗ್ಯಪ್ಪನವರ್, ಕೆ ಎಸ್ ನಾಡಗೌಡ, ಸೂರಪ್ಪ ಮಾಟೊಳ್ಳಿ, ಕಲ್ಲಯ್ಯ ಉಪ್ಪಿನ, ವಿನಾಯಕ ಚಿಕ್ಕಮಠ ಹಾಗೂ ಇತರೆ ಗ್ರಾಮದ ಮಹಿಳೆಯರು ನಾಗರಿಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!