Belagavi

ಬೆಳಗಾವಿಯಲ್ಲಿ 2ನೇ ದಿನವೂ ಇಡಿ ಪರಿಶೀಲನೆ ಚುರುಕು: ನೀಲಣ್ಣವರ್‌ ಆಸ್ತಿಪಾಸ್ತಿ ಶೋಧ!

Share

ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಂ.ಎಚ್. ಟವರ್‌ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಆರಂಭಿಸಿರುವ ಪರಿಶೀಲನಾ ಕಾರ್ಯ ಇಂದು ಮೂರನೇ ದಿನಕ್ಕೂ ಮುಂದುವರಿದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡ ಬೆನ್ನಲ್ಲೇ, ಸಿಆರ್‌ಪಿಎಫ್ ಭದ್ರತೆಯೊಂದಿಗೆ ಮಂಗಳೂರು ಹಾಗೂ ಗೋವಾದ ಇಡಿ ತಂಡಗಳು ದಾಖಲೆಗಳ ತೀವ್ರ ಪರಿಶೀಲನೆಯಲ್ಲಿ ತೊಡಗಿವೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು, ಶಿವಾನಂದ ನೀಲಣ್ಣವರ್ ಅವರಿಗೆ ಸೇರಿದ ಆಸ್ತಿಪಾಸ್ತಿ ಮತ್ತು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಪರಿಶೀಲನೆಯ ವೇಳೆ ಶಿವಾನಂದ ನೀಲಣ್ಣವರ್ ಸ್ಥಳದಲ್ಲಿ ಇಲ್ಲದಿರುವುದರಿಂದ, ಅವರ ಪತ್ನಿ ಹಾಗೂ ಸಹೋದರನನ್ನು ಕರೆತಂದು ಅವರ ಸಮ್ಮುಖದಲ್ಲೇ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಿನ್ನೆಯಿಂದಲೇ ಆರಂಭವಾಗಿರುವ ಈ ಸುದೀರ್ಘ ಪ್ರಕ್ರಿಯೆಯಲ್ಲಿ ಗೋವಾ ಮತ್ತು ಮಂಗಳೂರು ಮೂಲದ ಇಡಿ ಅಧಿಕಾರಿಗಳ ತಂಡ ಭಾಗಿಯಾಗಿದ್ದು, ಸಿಆರ್‌ಪಿಎಫ್ ಸಿಬ್ಬಂದಿಯ ಕಟ್ಟುನಿಟ್ಟಿನ ಭದ್ರತೆಯಲ್ಲಿ ಪರಿಶೀಲನೆ ಕಾಯ್ದುಕೊಳ್ಳಲಾಗಿದೆ.

Tags:

error: Content is protected !!