State

ನಾಗೇಂದ್ರ ನಮ್ಮ ಪಕ್ಷದ ದೊಡ್ಡ ಆಸ್ತಿ ; ಸಿಎಂ ಶಿವಕುಮಾರ್ ಪಕ್ಷದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ನಾಗೇಂದ್ರ ಸಿದ್ಧ.

Share

• ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತು.
• ನಾಗೇಂದ್ರ ನಮ್ಮ ಪಕ್ಷದ ದೊಡ್ಡ ಆಸ್ತಿ ಎಂದ ಶಿವಕುಮಾರ್
• ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ
• ಕೇಂದ್ರದ ಸಚಿವರ ಮೇಲೂ ಹಲವು ಪ್ರಕರಣಗಳಿವೆ

ನಾಗೇಂದ್ರ ನಮ್ಮ ಪಕ್ಷದ ದೊಡ್ಡ ಆಸ್ತಿ. ಅವರದ್ದು ಯಾವುದೇ ತಪ್ಪಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಪಕ್ಷದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವೆಂದು ನಾಗೇಂದ್ರ ತಿಳಿಸಿದ್ದು, ಪಕ್ಷದ ಹಿರಿಯರು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಕೇಂದ್ರದ ಸಚಿವರ ಮೇಲೂ ಹಲವು ಪ್ರಕರಣಗಳಿವೆ ಎಂದು ತಿರುಗೇಟು ನೀಡಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು. ನಾಗೇಂದ್ರ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ನಾಗೇಂದ್ರ ನಮ್ಮ ಪಕ್ಷಕ್ಕೆ ದೊಡ್ಡ ಆಸ್ತಿ. ನಾಲ್ಕು ಬಾರಿ ಚುನಾವಣೆಯನ್ನು ಗೆದ್ದಿದಾರೆ. ಅವರದ್ದು ತಪ್ಪಿಲ್ಲ ಎಂಬುದು ಗೊತ್ತಿದೆ. ಆದರೇ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪಕ್ಷದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಪಕ್ಷ ಚರ್ಚೆ ನಡೆಸಿ ತಿರ್ಮಾಣಿಸಲಿದೆ ಎಂದರು. ಕೇಂದ್ರ ಸಚಿವರ ಮೇಲೂ ಕೇಸಗಳಿವೆ. ಸುಖಾ ಸುಮ್ಮನೇ ತಡೆದುಕೊಳ್ಳಲಾಗದೇ, ಈ ರೀತಿ ಮಾಡುತ್ತಿದ್ದಾರೆ. ಅಲ್ಲದೇ ಮಹಿಳಾ ಸಚಿವರ ಆಯ್ಕೆಗೆ ಆದ್ಯತೆ ನೀಡಲಾಗುವುದು.

ಬಿಜೆಪಿಯವರ ಪಾದಯಾತ್ರೆಗೆ ಬೇಡ ಎನ್ನಲೂ ಸಾಧ್ಯವಿಲ್ಲ. ಆದರೇ, ಸದನದಲ್ಲಿ ಯಾವುದೇ ನೋಟಿಸ್ ನೀಡದೇ, ಯಾಕೆ ರಾಜೀನಾಮೆ ನೀಡಬೇಕು ಎಂದು ಹೇಳುವ ವಿರೋಧ ಪಕ್ಷಗಳಿಗಿಲ್ಲ. ಅವರ ನುಡಿಮುತ್ತುಗಳನ್ನು ತಿಳಿಸಿದ ಅವರು ನಮ್ಮ ನುಡಿಮುತ್ತುಗಳನ್ನು ಕೂಡ ಕೇಳಬೇಕಿತ್ತು. ನಾವು ಅವರ ಹಗರಣಗಳ ಪಟ್ಟಿ ಓದಬಹುದಿತ್ತು. ಭಯದಿಂದ ಗಲಾಟೆ ಮಾಡಿಕೊಂಡು ಹೋಗಿದ್ದಾರೆ ಎಂದರು. ರಾಹುಲ್ ಗಾಂಧಿ ಭೇಟಿ ವೇಳೆ ನಾಗೇಂದ್ರ ಅವರ ಬಗ್ಗೆ ಚರ್ಚೆಯಾಯಿತೇ ಎಂಬ ಪ್ರಶ್ನೆಗೆ ಪಕ್ಷಕ್ಕೆ ಬೇಕಾದ ಎಲ್ಲ ವಿಷಯಗಳನ್ನು ಚರ್ಚಿಸಲಾಗಿದೆ ಎಂದರು.

ಈ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹನುಮಣ್ಣವರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!