Belagavi

ವನ್ಯಜೀವಿ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ – ಡಾ ಕೆ ಬಿ ಈಶ್ವರಪ್ಪಗೋಳ ಅಭಿಮತ.

Share

ವನ್ಯಜೀವಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಅಕ್ಕತಂಗೇರಹಾಳದಿಂದ ಉಳವಿಗೆ ಶರಣರ ಬೃಹತ್ ಪಾದಯಾತ್ರೆ
ಸಸಿಗೆ ನೀರುಣಿಸಿ ಚಾಲನೆ ನೀಡಿದ ಡಾ. ಈಶ್ವರಪ್ಪಗೋಳ
ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಗಿಡ ನೆಡಲು ಕರೆ

ವನ್ಯಜೀವಿ ಪರಿಸರ ನಮ್ಮ ಮುಂದಿನ ಪೀಳಿಗೆಯ ಅತ್ಯಮೂಲ್ಯ ಅಸ್ತಿ. ಸುರಕ್ಷಿತವಾಗಿ ಹಸ್ತಾಂತರಿಸುವದು ನಮ್ಮೆಲ್ಲರ ಹೊಣೆಗಾರಿಕೆ. ವನ್ಯಜೀವಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಅಕ್ಕತಂಗೇರಹಾಳ ಕೃಷಿ ತಜ್ಞ ಡಾ ಕೆ ಬಿ ಈಶ್ವರಪ್ಪಗೋಳ ಹೇಳಿದರು.

ಅವರು ಶ್ರಾವಣ ಮಾಸದಲ್ಲಿ ವನ್ಯಜೀವಿ ಪರಿಸರ ಸಂರಕ್ಷಣೆಗಾಗಿ ಅಕ್ಕತಂಗೇರಹಾಳ ದಲ್ಲಿ ಗುರುವಾರ ಶ್ರೀ ಅಡವೀಸ್ವಾಮಿ ಶರಣರು ಮತ್ತು ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆಯ ಪದಾಧಿಕಾರಿಗಳಿಂದ ಜರುಗಿದ ೧೮ ನೇ ಶ್ರೀ ಕ್ಷೇತ್ರ ಉಳವಿ ಪಾದಯಾತ್ರೆಯನ್ನು ಕುಂಡದ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು. ನಮ್ಮ ನೆಲದ ಸೌಂದರ್ಯ ಇಮ್ಮಡಿಸಬಲ್ಲ ಆಕರ್ಷಕ ಗುಡ್ಡ ಬೆಟ್ಟಗಳನ್ನು ಶುಚಿತ್ವವಾಡಲು ಪಣ ತೊಡಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ , ಬಾಟಲ್ ಸೇರಿದಂತೆ ಜೀವರಾಶಿಗೆ ಮಾರಕವೆನಿಸುವ ವಸ್ತುಗಳನ್ನು ಎಸೆದು ಪರಿಸರ ನಾಶಗೊಳಿಸುವದು ಬೇಡ. ವನ್ಯಜೀವಿ ಇಲ್ಲದೇ ಗುಡ್ಡ ಬೆಟ್ಟಗಳನ್ನು ಕಾಣಲಾಗದು. ಅವುಗಳನ್ನು ಪ್ರೀತಿಸುವ ಗುಣ ನಮ್ಮದಾಗಬೇಕು. ಎರಡು ದಶಕಗಳಿಂದ ವನ್ಯಜೀವಿ, ಪರಿಸರ ಸಂರಕ್ಷಣೆಗಾಗಿ ಕೈ ಜೋಡಿಸಿದ ಅಡವಿಸ್ವಾಮಿ ಶರಣರು ಮತ್ತು ಪರಿಸರ ವೇದಿಕೆ ಸದಸ್ಯರು ಸದಾ ಅಭಿನಂದನೀಯರು ಎಂದರು.
ಇನ್ನೋರ್ವ ಅತಿಥಿಯಾಗಿದ್ದ. ಗ್ರಾಮದ ಧುರೀಣ, ರಮೇಶ ನಿರ್ವಾಣಿ ಮಾತನಾಡಿ, ಮೋಜಿಗಾಗಿ ಪ್ರಾಣಿ ಹತ್ಯೆ ಮಾಡುವ ಮನುಷ್ಯನ ಕ್ರತ್ಯ ಖಂಡನೀಯ. ಉಸಿರಿಗೊಂದು ಗಿಡ ನೆಟ್ಟು ಪೋಷಿಸಬೇಕಲ್ಲದೆ, ಕಾಡಿನತ್ತ ಹೆಜ್ಜೆ ನಮ್ಮದಾದಲ್ಲಿ ಪ್ರಾಣಿಗಳ ಹೆಜ್ಜೆ ನಾಡಿನತ್ತಾಗುವದು. ಇದರಿಂದ ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಕಾರಣವಾಗುವದು. ಅರಣ್ಯ ಸಂಪತ್ತು ಅತ್ಯಮೂಲ್ಯವಾದದ್ದು. ಅದರ ರಕ್ಷಣೆಯ ಬದ್ಧತೆ ನಮ್ಮದಾಗಬೇಕು. ಪರಿಸರದಲ್ಲಿ ವ್ಯತ್ಯಾಸವಾಗುವದಕ್ಕೆ ನಮ್ಮ ಕ್ರತ್ಯವೇ ಕಾರಣ. ಪರಿಸರ ವನ್ಯಪ್ರಾಣಿಗಳ ಸಂರಕ್ಷಣೆಗೆ ನಿಂತ ಶರಣರ ಈ ಬ್ರಹತ್ ನಡೆ ಅತ್ಯಂತ ಶ್ಲ್ಯಾಘನೀಯ ಎಂದರು.
ಈ ಸಂದರ್ಭದಲ್ಲಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಅದ್ಯಕ್ಷ ಎಸ್ ಬಿ ಉರಬಿನಹಟ್ಟಿ, ದುರ್ಗಾದೇವಸ್ಥಾನ ಟ್ರಸ್ಟ ನ ಅದ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ರಾಮಣ್ಣಾ ಮಾವನೂರ, ಶಿವಾನಂದ ಪಂಗನ್ನವರ, ಅಪ್ಪಣ್ಣಾ ಹಳಮನ್ನಿ ಮಲ್ಲಿಕಾರ್ಜುನ ನಾಯಿಕ, ಅಡಿವೆಪ್ಪಾ ಪಾಟೀಲ , ಬಾಳಗೌಡಾ ಪಾಟೀಲ, ರುದ್ರಣ್ಣಾ ಬಸ್ಸಾಪೂರ, ಮಹೇಶ ನಿರ್ವಾಣಿ, ರಾಜು ತಿಳಗಂಜಿ, ದುಂಡಪ್ಪಾ ವನ್ನೂರ, ಬಸು ಗುರಾಯಿ, ಗೌಡಪ್ಪಾ ಹೊಳೆಯಾಚಿ, ದುರಗಪ್ಪ ಸನದಿ, ಸುರೇಶ ಬೆಣ್ಣಿ, ರಾಜು ಕರಲಿಂಗನ್ನವರ, ದಯಾನಂದ ಹ್ಯಾಗಿ, ಮಂಜುನಾಥ ಹರಿಜನ ಸೇರಿದಂತೆ ನೂರಾರು ಅಡವಿಸ್ವಾಮಿ ಶರಣರು, ಪಾದಯಾತ್ರಿಕರು, ಗ್ರಾಮದ ಹಿರಿಯರು , ಯುವಕರು ಉಪಸ್ಥಿತರಿದ್ದರು. ತಾಲೂಕ ಆರೋಗ್ಯ ಅಧಿಕಾರಿ ರುದ್ರಣ್ಣಾ ಬಸ್ಸಾಪೂರ ಸ್ವಾಗತಿಸಿ ವಂದಿಸಿದರು.
ವರದಿ, ಸುರೇಶ ಉರಬಿನಹಟ್ಟಿ

Tags:

error: Content is protected !!