ಬೆಳಗಾವಿಯ ಶಹಾಪುರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ರಕ್ಷಾ ಬಂಧನವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

ಬೆಳಗಾವಿಯ ಶಹಾಪುರದ ಸರಸ್ವತಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಮೀನಾಕ್ಷೀ ದೀದಿ ಅವರು ಮಾತನಾಡಿ, ರಕ್ಷಾಬಂಧನವೆಂಬುದು ಕೇವಲ ಅಣ್ಣ-ತಂಗಿಯರ ಬಂಧಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ ಹಾಗೂ ವಿಶ್ವ ಬಂಧುತ್ವದ ಸಂದೇಶ ಸಾರುವ ಮಹತ್ವದ ಹಬ್ಬವಾಗಿದೆ ಎಂದು ಪ್ರತಿಪಾದಿಸಿದರು. ಇದೇ ವೇಳೆ ಮಹಾಭಾರತದ ಐತಿಹಾಸಿಕ ಹಿನ್ನೆಲೆ ಹಾಗೂ ಧ್ಯಾನದ ಮಹತ್ವವನ್ನು ವಿವರಿಸಿದ ಅವರು, ಬ್ರಹ್ಮಕುಮಾರಿ ಅನ್ನಪೂರ್ಣಾ ದೀದಿ, ಬ್ರಹ್ಮಕುಮಾರಿ ರಾಧಾ ದೀದಿ ಹಾಗೂ ಬ್ರಹ್ಮಕುಮಾರ್ ಕಾಶಿನಾಥ್ ಅವರ ಉಪಸ್ಥಿತಿಯಲ್ಲಿ ಜರುಗಿದ ಈ ವಿಶೇಷ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರ್ ಶ್ರೀಕಾಂತ್ ಭಾಯ್, ಬ್ರಹ್ಮಕುಮಾರ್ ದತ್ತಾತ್ರೇಯ ಭಾಯ್, ಬ್ರಹ್ಮಕುಮಾರ್ ಮನೋಹರ್ ಭಾಯ್, ರಜಪುತ್ ಭಾಯ್, ಬಸವರಾಜ್ ಸದಲಗಿ ಹಾಗೂ ದಾನಪ್ಪ ಕಟ್ಟಿಮನಿ ಸೇರಿದಂತೆ ಅನೇಕ ಬಂಧು-ಭಗಿನಿಯರು ಪಾಲ್ಗೊಂಡು ಪರಸ್ಪರ ರಾಖಿ ಬಂಧಿಸಿ ಶುಭಕೋರಿದರು.
