ಸೈನಿಕರು ತಮ್ಮ ಕುಟುಂಬವನ್ನು ತ್ಯಾಗ ಮಾಡಿ ದೇಶದ ರಕ್ಷಣೆಗಾಗಿ ಗಡಿಯಲ್ಲಿ ದೇಶ ರಕ್ಷಣೆ ಮಾಡಿದರೆ ದೇಶದ ಒಳಗಡೆ ನಮ್ಮ ಆರಕ್ಷಕ ಬಂಧುಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೊತೆಗೆ ನಿಂತು ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಹಬ್ಬ ಹರಿದಿನಗಳೆನ್ನದೆ ನಿರಂತರ ಸೇವೆಯಲ್ಲಿ ಇರುತ್ತಾರೆ ಅಂತಹ ಆರಕ್ಷಕ ಸಹೋದರರಿಗೆ ಮಹಾಒಕ್ಕೂಟದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ವತಿಯಿಂದ ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿದರು.

ಸಹೋದರ ಸಹೋದರಿಯರ ಬಾಂಧವ್ಯದ ಹಬ್ಬ ಸಮಾಜದಲ್ಲಿ ಪ್ರೀತಿ ವಾತ್ಸಲ್ಯ ಮಮತೆ ಹೆಚ್ಚಿಸುವಂತಹ ಪುರಾತನ ಇತಿಹಾಸವುಳ್ಳಂತಹ ರಕ್ಷಾ ಬಂಧನ ಕಾರ್ಯಕ್ರಮವನ್ನು ಮಾಜಿ ಸೈನಿಕರ ಸಂಘಟನೆಯಿಂದ ಪೊಲೀಸ್ ಸಿಬ್ಬಂದಿಗಳಿಗೆ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಹೆಮ್ಮೆಯ ವಿಷಯ. ಸೈನಿಕರು ದೇಶದ ಗಡಿಯನ್ನು ಕಾಯುತ್ತಿರುವುದು ನಾವೆಲ್ಲರೂ ಸುರಕ್ಷಿತವಾಗಿ ನಮ್ಮ ಸೇವೆಯನ್ನು ಮಾಡಲು ಸಹಕಾರಿಯಾಗಿದೆ. ಅತೀ ಸಮೀಪದಿಂದ ನಾನು ಸೈನಿಕರ ಸುಖ ದುಃಖಗಳನ್ನು ಗಮನಿಸಿದ್ದೇನೆ. ಅವರ ತ್ಯಾಗ ಬಲಿದಾನ ಮೆಚ್ಚುವಂತಹದ್ದು ಸೈನಿಕರ ಕಷ್ಟ ಸುಖಗಳಲ್ಲಿ ನಾವು ಯಾವಾಗಲೂ ಭಾಗಿಯಾಗುತ್ತೇವೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಪೋಲಿಸ್ ಆಯುಕ್ತಾರಾದ ಬೋರಸೆ ಭೂಷಣ ಗುಲಾಬರಾವ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರುವಂತಹ ಮಹಾಒಕ್ಕೂಟದ ಮಹಿಳಾ ಘಟಕದ ಪದಾಧಿಕಾರಿಗಳು ಪೊಲೀಸ್ ಆಯುಕ್ತರು ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಯವರಿಗೆ ರಕ್ಷಾಬಂಧನ ಮಾಡಿ ಸಿಹಿ ಹಂಚಿ ವಿಜೃಂಭಣೆಯಿಂದ ರಕ್ಷಾಬಂಧನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಮಹಾಒಕ್ಕೂಟದ ಗೌರವಾಧ್ಯಕ್ಷರಾದ ರಮೇಶ ಚೌಗಲಾ, ಉಪಾಧ್ಯಕ್ಷರಾದ ಸಂಗಪ್ಪ ಮೇಟಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಬಸಪ್ಪ ಕಾಡನ್ನವರ, ಮಹೇಶ ಕಮ್ಮಾರ, ಸಂತೋಷ ಮಠಪತಿ, ಮಹಾಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಪಟ್ಟಣಶೆಟ್ಟಿ, ದೀಪಾ ಜಾಮಗೌಡ, ಗೀತಾ ಗನಬಸಪ್ಪನವರ, ಜ್ಯೋತಿ ಗೌಡರ, ಸುನೀತಾ ಕುರ್ಕುರೆ, ಪ್ರತಿಭಾ ಹಾರೂಗೊಪ್ಪ, ಮಹಾಒಕ್ಕೂಟದ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.
