Belagavi

೨ನೇ ಓಪನ್ ಇಂಟರ್ನ್ಯಾಷನಲ್ ಕರಾಟೆಯಲ್ಲಿ ಬೆಳಗಾವಿಯ ಭಾರತಿ ಬುಡೋಕಾನ್ ಅಕಾಡೆಮಿಗೆ ಭರ್ಜರಿ ಜಯ

Share

ಕೊಪ್ಪಳದಲ್ಲಿ ನಡೆದ ೨ನೇ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಷಿಕಪ್‌ನಲ್ಲಿ ಬೆಳಗಾವಿಯ ಭಾರತಿ ಬುಡೋಕಾನ್ ಕರಾಟೆ ಆಂಡ್ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸೆನ್ಸೇ ಆಕಾಶ್ ಮೋಹನ್ ಬಡಿಗೇರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ೨೦ ವಿದ್ಯಾರ್ಥಿಗಳು ಪ್ರಶಸ್ತಿಗಳ ಬೆಳೆ ತೆಗೆಯುವ ಮೂಲಕ ಬೆಳಗಾವಿ ನಗರದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

ಕೊಪ್ಪಳದ ಸಿ.ಬಿ.ಎಸ್. ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ ಕೂಟದಲ್ಲಿ ಬೆಳಗಾವಿ ವಡಗಾವಿಯ ಭಾರತಿ ಬುಡೋಕಾನ್ ಅಕಾಡೆಮಿಯ ೨೦ ಸ್ಪರ್ಧಿಗಳು ಪಾಲ್ಗೊಂಡು, ಕಾತಾ ವಿಭಾಗದಲ್ಲಿ ೬ ಸುವರ್ಣ, ೮ ಬೆಳ್ಳಿ, ೬ ಕಂಚಿನ ಹಾಗೂ ಕುಮಿಟೆ ವಿಭಾಗದಲ್ಲಿ ೨ ಸುವರ್ಣ, ೬ ಬೆಳ್ಳಿ, ೫ ಕಾಂಸ್ಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವೇದಾ ಗುರವ್, ಸಿದ್ಧಿ ವಿ. ಪಾಟೀಲ್, ಭೂಷಣ್ ಬಿ. ಹಿಡಕಲ್, ವೇದಾಂತ್ ವಿ. ಹಳಗೆಕರ್, ಸ್ವಸ್ತಿಕ್ ಎಸ್. ಯಲಾಜಿ, ಸಮರ್ಥ್ ಎಸ್. ಯಲಾಜಿ, ಶಿವಂ ಪಿ. ಕೊಕಿತಕರ್, ಗಣೇಶ್ ಆರ್. ಬಡಗಾವಿ, ವಿರಾಜ್ ವಿ. ಹಳಗೆಕರ್, ಲಾವಣ್ಯ ಆರ್. ಮಡಿನವಿ, ವೆಂಕಟೇಶ್ ಜಿ. ಪಾಟೀಲ್, ಪ್ರಣೀತ್ ಆರ್. ಕೊಂಕೇರಿ, ಅನನ್ಯ ಎಮ್. ಲೋಹಾರ್, ಭುವನ್ ಎ. ಪಾಲಂಕರ್, ಶೌರ್ಯ ಎಸ್. ಸುಬೇಕರ್, ಪೂರ್ಣಶ್ರೀ ಎನ್. ಕುಲಕರ್ಣಿ, ಸೈಶ್ ಎಸ್. ಯಲಾಜಿ, ಈರಣ್ಣ ಎಮ್. ಹುಣಗುಂದ, ಶ್ರೇಯಸ್ ಎನ್. ರಾಠಕರ್ ಮತ್ತು ರಿಧೇನ್ ಎಸ್. ಬೈಂಗೇ ಅವರು ತೀವ್ರ ಪೈಪೋಟಿಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿ ಪದಕಗಳಿಗೆ ಮುತ್ತಿಟ್ಟಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಜಡ್ಜ್ ವಿನಾಯಕ್ ಪಾಟೀಲ್, ವಿಷ್ಣು ಪಾಟೀಲ್, ಮಹೇಶ್ ಪಾಟೀಲ್, ಯಶ್ ಪಾಟೀಲ್ ಹಾಗೂ ಜ್ಯೋತಿಬಾ ಪಾಟೀಲ್, ಕಿರಣ್ ಶೇನೋಳ್ಕರ್, ಪ್ರಮೋದ್ ನಾಡಕೌಡ್ಕರ್, ಸಚಿನ್ ಕೊಳಚೆ, ಕವಿತಾ ಪಾಟೀಲ್, ಸುನೀತಾ ಪಾಟೀಲ್, ಭಾರತ್ ಕೋವಡ್ಕರ್, ಅನಿಕೇತ್ ಕೋವಡ್ಕರ್, ಪರಶುರಾಮ್ ಕೋವಡ್ಕರ್ ಸೇರಿದಂತೆ ಕ್ರೀಡಾಭಿಮಾನಿಗಳು, ಪೋಷಕರು ಮತ್ತು ನಾಗರಿಕರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

Tags:

error: Content is protected !!