Belagavi

ಬೆಳಗಾವಿ: ಕಾಲೇಜು ಮುಂಭಾಗ ಚಾಕೊಲೇಟ್ ಪ್ಯಾಕೇಟ್’ನಲ್ಲಿ ಗಾಂಜಾ ಮಾರಾಟ ; ಆರೋಪಿ ಬಂಧನ!

Share

ಬೆಳಗಾವಿಯ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜು ಮುಂಭಾಗ ಸಾರ್ವಜನಿಕರಿಗೆ ಮಾದಕ ವಸ್ತು ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 94,600 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಡೇಬಜಾರ ಉಪ-ವಿಭಾಗದ ಎಸಿಪಿ ಶೇಖರಪ್ಪ ಹೆಚ್. ಅವರ ಮಾರ್ಗದರ್ಶನದಲ್ಲಿ ಹಾಗೂ ಇನ್ಸ್‌ಪೆಕ್ಟರ್ ಮಹಾಂತೇಶ. ಹೊಸಪೇಟೆ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶ ಮೂಲದ ಹಾಗೂ ಪ್ರಸ್ತುತ ಹನುಮಾನ್ ನಗರ ನಿವಾಸಿ ಭೋಲು ಜಿತ್ತಾಲ ಪ್ರಜಾಪತಿ (39) ಎಂಬಾತನನ್ನು ಬಂಧಿಸಿದ್ದಾರೆ. ಕಾಲೇಜು ಬಳಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಯಿಂದ 54,000 ರೂ. ಮೌಲ್ಯದ 6 ಕೆ.ಜಿ 858 ಗ್ರಾಂ ತೂಕದ 27 ಗಾಂಜಾ ಚಾಕೊಲೇಟ್ ಪ್ಯಾಕೇಟ್‌ಗಳು, 10,000 ರೂ. ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್, 600 ರೂ. ನಗದು ಹಾಗೂ 30,000 ರೂ. ಮೌಲ್ಯದ ಸ್ಕೂಟಿ ಸೇರಿದಂತೆ ಒಟ್ಟು 94,600 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Tags:

error: Content is protected !!