ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನಲ್ಲಿ ಧೀಟಾ ಡೈನಾಮಿಕ್ಸ್ ಸಹಯೋಗದೊಂದಿಗೆ ‘ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್ ಎಕ್ಸಲೆನ್ಸ್’ ಉದ್ಘಾಟನೆಯಾಗಿದೆ. ಶಿಕ್ಷಣ ಹಾಗೂ ಉದ್ಯಮ ರಂಗದ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆಯನ್ನಿಡಲಾಗಿದೆ.

ಸುರೇಶ್ ಅಂಗಡಿ ಎಜ್ಯುಕೇಷನ್ ಫೌಂಡೇಷನ್ ಸಂಸ್ಥಾಪನಾ ದಿನದ ಪ್ರಯುಕ್ತ ಎಐಟಿಎಂನ ಕಂಪ್ಯೂಟರ್ ಸೈನ್ಸ್ ವಿಭಾಗವು ಧೀಟಾ ಡೈನಾಮಿಕ್ಸ್ ಸಹಯೋಗದಲ್ಲಿ ಈ ಕೇಂದ್ರವನ್ನು ಆಗಸ್ಟ್ 8 ರಂದು ಆರಂಭಿಸಿದೆ. ಎಸ್ಎಇಎಫ್ ನಿರ್ದೇಶಕರಾದ ಡಾ. ಸ್ಪೂರ್ತಿ ಆರ್. ಪಾಟೀಲ ಅವರು ಕೇಂದ್ರವನ್ನು ಉದ್ಘಾಟಿಸಿ, ಉದ್ಯಮ ಸಹಯೋಗವು ವಿದ್ಯಾರ್ಥಿಗಳ ಜಾಗತಿಕ ವೃತ್ತಿಜೀವನಕ್ಕೆ ಸಹಕಾರಿಯಾಗಲಿದೆ ಎಂದರು. ಧೀಟಾ ಡೈನಾಮಿಕ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಗಜೇಂದ್ರ ದೇಶಪಾಂಡೆ ಮಾತನಾಡಿ, ಸೈಬರ್ ಬೆದರಿಕೆಗಳನ್ನು ಎದುರಿಸಲು ನುರಿತ ತಜ್ಞರ ಅಗತ್ಯವಿದೆ ಎಂದರು. ಇದೇ ವೇಳೆ ವಿದ್ಯಾರ್ಥಿಗಳ ಇಂಟರ್ನ್ಶಿಪ್, ಕೌಶಲ್ಯಾಭಿವೃದ್ಧಿ, ಸಂಶೋಧನೆ ಹಾಗೂ ಪ್ಲೇಸ್ಮೆಂಟ್ ಬೆಂಬಲಕ್ಕಾಗಿ ಎಐಟಿಎಂ ಮತ್ತು ಧೀಟಾ ಡೈನಾಮಿಕ್ಸ್ ನಡುವೆ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ಕಾರ್ಯಕ್ರಮದಲ್ಲಿ ಪ್ರಿನ್ಸಿಪಾಲ್ ಡಾ. ಆನಂದ್ ಬಿ. ದೇಶಪಾಂಡೆ, ರಾಜು ಜೋಶಿ, ಡಾ. ಧನಶ್ರೀ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
