Belagavi

ಉತ್ಪಾದನಾ ವಲಯದಲ್ಲಿ ಭಾರತಕ್ಕೆ ಅಭೂತಪೂರ್ವ ಅವಕಾಶ: ಜಾಗತಿಕ ಮಟ್ಟದಲ್ಲಿ ಜರ್ಮನಿ-ಜಪಾನ್‌ಗೆ ಪೈಪೋಟಿ ನೀಡಲು ನಿತೀನ್ ಲಾಂಡಗೆ ಕರೆ

Share

ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಮತ್ತು ಶೈಕ್ಷಣಿಕ ರಂಗದ ನಡುವಿನ ಬಾಂಧವ್ಯ ಹಾಗೂ ತಂತ್ರಜ್ಞಾನ ಅಳವಡಿಕೆಯ ಅಗತ್ಯತೆಯನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ದೊರೆತಿರುವ ಅತ್ಯಂತ ದೊಡ್ಡ ಅವಕಾಶ ಇದಾಗಿದೆ ಎಂದು ‘ಇಂಡಸ್ಟ್ರಿ ಸಮ್ಮಿಟ್ ೨೦೨೬’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿತೀನ್ ಲಾಂಡಗೆ ಅವರು ತಿಳಿಸಿದರು.

ಬೆಳಗಾವಿಯ ರಾಯಲ್ ರಿಟಿಸ್ ಹೋಟೆಲ್‌ನಲ್ಲಿ ಐಇಇಇ (IEEE) ಉತ್ತರ ಕರ್ನಾಟಕ ಸಬ್‌ಸೆಕ್ಷನ್, ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ಬಿಡಿಎಸ್‌ಎಸ್‌ಐಎ (BDSSIA) ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿತೀನ್ ಲಾಂಡಗೆ ಅವರು, ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಉದ್ದಿಮೆ ಹಾಗೂ ಶೈಕ್ಷಣಿಕ ರಂಗಗಳ ನಡುವೆ ಪರಸ್ಪರ ಉತ್ತಮ ಬಾಂಧವ್ಯ ಮತ್ತು ಸಹಕಾರ ಇರುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಇಂದು ಡಿಜಿಟಲೀಕರಣವು ಕೇವಲ ಒಂದು ಆಯ್ಕೆಯಾಗಿ ಉಳಿದಿಲ್ಲ, ಬದಲಾಗಿ ಅದು ಪ್ರತಿಯೊಂದು ಕ್ಷೇತ್ರದಲ್ಲೂ ದೈನಂದಿನ ಕಾರ್ಯಚಟುವಟಿಕೆಯ ಅವಿಭಾಜ್ಯ ಅಂಗವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಕಚ್ಚಾವಸ್ತು, ಆಧುನಿಕ ತಂತ್ರಜ್ಞಾನ ಹಾಗೂ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಉದ್ಯಮಗಳ ಯಶಸ್ಸಿಗೆ ಅತಿ ಮುಖ್ಯ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನಾ ವಲಯಕ್ಕೆ ಅಭೂತಪೂರ್ವ ಅವಕಾಶಗಳು ಒದಗಿಬಂದಿವೆ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಉದ್ಯಮ ಮತ್ತು ಉತ್ಪಾದನೆಗೆ ಇಷ್ಟೊಂದು ದೊಡ್ಡ ಮಟ್ಟದ ಅವಕಾಶ ಸಿಕ್ಕಿರುವುದು ಇದೇ ಮೊದಲು ಎಂದ ಅವರು, “ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾರತೀಯ ಕಂಪನಿಗಳು ಕೇವಲ ನೆರೆಹೊರೆಯ ದೇಶಗಳೊಂದಿಗೆ ಸ್ಪರ್ಧಿಸದೆ, ಗುಣಮಟ್ಟಕ್ಕಾಗಿ ಜರ್ಮನಿ ಹಾಗೂ ನಿಖರತೆಗಾಗಿ ಜಪಾನ್‌ನಂತಹ ಜಾಗತಿಕ ಮಟ್ಟದ ದೇಶಗಳೊಂದಿಗೆ ಸ್ಪರ್ಧೆ ನೀಡುವ ಅಗತ್ಯವಿದೆ” ಎಂದು ಪ್ರತಿಪಾದಿಸಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಆಟೋಮೇಷನ್, ರೋಬೋಟಿಕ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬರಬೇಕಿದೆ ಎಂದು ಅವರು ಕರೆ ನೀಡಿದರು.

ಭಾರತದಲ್ಲಿ ಪ್ರಸ್ತುತ ಉತ್ಪಾದನಾ ವಲಯವು ಅಭೂತಪೂರ್ವ ಬೆಳವಣಿಗೆ ಕಾಣುತ್ತಿದ್ದು, ಸ್ವಾತಂತ್ರ್ಯದ ನಂತರ ದೇಶಕ್ಕೆ ದೊರೆತಿರುವ ಅತ್ಯಂತ ದೊಡ್ಡ ಉತ್ಪಾದನಾ ಅವಕಾಶ ಇದಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ನಿತೀನ್ ಲಾಂಡಗೆ ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆಯೊಂದರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಈ ಹಿಂದೆ ತಿಂಗಳಿಗೆ ಕೇವಲ ೫೦೦ ರಿಂದ ೧,೦೦೦ ಯೂನಿಟ್‌ಗಳನ್ನು ತಯಾರಿಸುತ್ತಿದ್ದ ಕಂಪನಿಗಳು, ಇಂದು ಮಾರುಕಟ್ಟೆಯ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತಿಂಗಳಿಗೆ ೧೦,೦೦೦ಕ್ಕೂ ಅಧಿಕ ಯೂನಿಟ್‌ಗಳನ್ನು ಉತ್ಪಾದಿಸುವ ಹಂತಕ್ಕೆ ತಲುಪಿವೆ. ಚೀನಾ, ಮಲೇಶಿಯಾ, ವಿಯೆಟ್ನಾಂ ಮತ್ತು ಫಿಲಿಪೈನ್ಸ್‌ನಂತಹ ಜಾಗತಿಕ ಸ್ಪರ್ಧಿಗಳಿಂದ ಕಠಿಣ ಸವಾಲು ಎದುರಾಗುತ್ತಿದ್ದರೂ, ತಂತ್ರಜ್ಞಾನ ವಿನಿಮಯ ಮತ್ತು ಬೃಹತ್ ಪ್ರಮಾಣದ ಉತ್ಪಾದನಾ ಸಾಮರ್ಥ್ಯದೊಂದಿಗೆ ಜಾಗತಿಕ ಮಲ್ಟಿನ್ಯಾಷನಲ್ ಕಂಪನಿಗಳ ಬೇಡಿಕೆಯನ್ನು ಪೂರೈಸಲು ಭಾರತೀಯ ಉದ್ಯಮ ರಂಗವು ಸದಾ ಸಿದ್ಧವಾಗಿರಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಡರೇಟರ್ ಆಗಿ ಅನಿಂದ್ಯ ಸಹಾ, ಪ್ಯಾನಲಿಸ್ಟ್‌ಗಳಾಗಿ ರಮೇಶ್ ದರ್ಲಾ ಡಾ. ವಿಜಯ್ ಅಠವಲೆ, ರೋಹನ್ ಜವಳಿ ಮತ್ತು ಮಲ್ಲಿಕಾರ್ಜುನ ಕಂಬಳಿಹಾಳ ಉಪಸ್ಥಿತರಿದ್ದರು. ಹಾಗೆಯೇ ದಿಕ್ಸೂಚಿ ಭಾಷಣಕಾರರಾಗಿ ರುದ್ರಸ್ವಾಮಿ (NSIC), ಮಹೇಶ್ ವಸ್ತ್ರದ್, ಆಲೋಕನಾಥ್ ಡೇ, ಅನಂತನಾಗ್ ಬಿ. ಕೆ. ಹಾಗೂ ರಾಹುಲ್ ಸೂರ್ಯವಂಶಿ ಭಾಗವಹಿಸಿದ್ದರು.

Tags:

error: Content is protected !!