ಸಾಂಬ್ರಾ ಬಳಿಯ ಮೇನ್ ರೋಡ್, ಬಸವಣ ಕುಡಚಿಯ ನಿವಾಸಿ ಮಾರುತಿ ಧಾಕಲು ಮೊದಗೆಕರ ಅವರು ರವಿವಾರ, ಜುಲೈ ೧೯ ರಂದು ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ೮೨ನೇ ವಯಸ್ಸಿನಲ್ಲಿ ನಿಧನರಾದರು.

ಅವರು ಮಗ, ನಾಲ್ವರು ವಿವಾಹಿತ ಪುತ್ರಿಯರು, ಸೊಸೆ, ಅಳಿಯ, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ರಕ್ಷಾವಿಸರ್ಜನ ವಿಧಿಯನ್ನು ಸೋಮವಾರ, ಜುಲೈ ೨೦ ರಂದು ಬೆಳಿಗ್ಗೆ ೮ ಗಂಟೆಗೆ ನೆರವೇರಿಸಲಾಗುವುದು. ಇವರು ವಾರ್ಡ್ ಸಂಖ್ಯೆ ೪೮ ರ ನಗರಸೇವಕ ಬಸವರಾಜ ಮೊದಗೆಕರ ಅವರ ತಂದೆಯಾಗಿದ್ದಾರೆ.
