ನಗರದ ಸಮಾದೇವಿ ಗಲ್ಲಿಯ ನಿವಾಸಿ ಲೀಲಾವತಿ ವೀರುಪಾಕ್ಷಪ್ಪ ಬಾಗಿ (98) ಅವರು ಬುಧವಾರ ವಯೋಸಹಜ ಕಾರಣಗಳಿಂದ ನಿಧನರಾದರು.

ಗಣಾಚಾರಿ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮೊಮ್ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರು ಬಸವೇಶ್ವರ ಸಹಕಾರಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಗಿರೀಶ ಬಾಗಿ ಅವರ ತಾಯಿಯಾಗಿದ್ದರು.
