Belagavi

ಹಿಂದವಾಡಿಯಲ್ಲಿ ಕ್ರಾಂತಿ ಮಹಿಳಾ ಮಂಡಳದ 20ನೇ ವಾರ್ಷಿಕೋತ್ಸವ: ಕಲೆ, ಸಂಸ್ಕೃತಿ ಬಿಂಬಿಸಿದ ‘ಗಾನ ನಾಟ್ಯ ಸಂಭ್ರಮ’

Share

ಕ್ರಾಂತಿ ಮಹಿಳಾ ಮಂಡಳದ 20ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ಯ ‘ಗಾನ ನಾಟ್ಯ ಸಂಭ್ರಮೋತ್ಸವ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕೌಟುಂಬಿಕ ಜವಾಬ್ದಾರಿಯೊಂದಿಗೆ ನಾಡಿನ ಕಲೆ, ಸಂಸ್ಕೃತಿ, ರಾಷ್ಟ್ರಾಭಿಮಾನ ಹಾಗೂ ಸ್ತ್ರೀ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಈ ಮಂಡಳದ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಮುಖ ಟ್ಯಾಕ್ಸ್ ಕನ್ಸಲ್ಟೆಂಟ್ ಜಿತೇಶ್ ಕಬ್ಬೂರ್ ಅವರು ದೀಪ ಪ್ರಜ್ವಲಿಸುವ ಮೂಲಕ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಂಡಳದ ಸುದೀರ್ಘ ಸಾಮಾಜಿಕ ಸೇವೆಯನ್ನು ಸ್ಮರಿಸುವ “೨೦೦೬-೨೦೨೬ ರ ಸಾಮಾಜಿಕ ಕಾರ್ಯಗಳ ಪಕ್ಷಿನೋಟ” ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ರಾಂತಿ ಮಹಿಳಾ ಮಂಡಳವು ಬೆಳ್ಳಿ ಮಹೋತ್ಸವವನ್ನು ಆಚರಿಸಲಿ ಎಂದು ಶುಭ ಹಾರೈಸಿದರು. ಮಂಡಳದ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮಠದ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಉಪಾಧ್ಯಕ್ಷರಾದ ತ್ರಿಶಿಲಾ ಪಾಯಪ್ಪನವರ ಅತಿಥಿಗಳ ಪರಿಚಯ ಮಾಡಿ ಮಂಡಳದ ಕಾರ್ಯಗಳನ್ನು ವಿವರಿಸಿದರು. ಕಾರ್ಯದರ್ಶಿ ಶ್ರೀಮತಿ ಭಾರತಿ ರತ್ನಪ್ಗೊಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಮಮತಾ ಆಂಟಿನ ಮತ್ತು ರತ್ನಶ್ರೀ ಗುಡೆರ ಅವರು ಅತಿಥಿಗಳಿಗೆ ಪುಷ್ಪ ನೀಡಿ ಗೌರವ ಸಲ್ಲಿಸಿದರು.

ಮಂಡಳದ ಸದಸ್ಯರಾದ ಪ್ರೇಮಾ ಉಪಾಧ್ಯಾಯ ಅವರು ಗಣಪತಿಯ ಪ್ರಾರ್ಥನೆಗೆ ನೃತ್ಯ ಮಾಡುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. ಉಮಾ ಸಂಗೀತ ಪ್ರತಿಷ್ಠಾನದ ಎಲ್ಲ ವಿದ್ಯಾರ್ಥಿನಿಯರಿಂದ ಮತ್ತು ಚಿಕ್ಕ ಮಕ್ಕಳಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು. ಇವರಿಗೆ ಸಾಬಣ್ಣವರ ಸರ್ ತಬಲಾ ಸಾತ್ ನೀಡಿದರೆ, ಅಶೋಕ ಕಟ್ಟಿ ಅವರು ಕ್ಯಾಸಿಯೋ ನುಡಿಸಿದರು. ಮಂಡಳದ ಸದಸ್ಯರಾದ ವಾಣಿ ಹೇರೇಕರ್ ಮತ್ತು ರೇಷ್ಮಾ ದಿವಟ್ಟೆ ಅವರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಶ್ರೀಮತಿ ಅಕ್ಷತಾ ಪಾಟೀಲ್ ಮತ್ತು ಶ್ರೀಮತಿ ದೀಪ್ತಿ ಕಾಗವಾಡ ಸಮಗ್ರ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಆರ್ಷ ಆಶ್ರಮದ ಎಲ್ಲ ಮಕ್ಕಳು ಹಾಗೂ ಮಂಡಳದ ಎಲ್ಲ ಸದಸ್ಯರು ಉಪಸ್ಥಿತರಿದ್ದ ಈ ಸಮಾರಂಭಕ್ಕೆ ಗೀತಾ ಯಮ್ಮಿ ಅವರು ವಂದನಾರ್ಪಣೆ ಮಾಡಿದರು.

Tags:

error: Content is protected !!