ಖಾನಾಪುರ ತಾಲೂಕಿನ ಇದ್ದಲಹೊಂಡ ಗ್ರಾಮದ ನಿವಾಸಿ, ಮಾಜಿ ತಾಲೂಕು ಪಂಚಾಯತಿ ಸದಸ್ಯ ರಮೇಶ್ ದೇಸಾಯಿ ಅವರ ಪುತ್ರ ಸಂಜಯ್ ರಮೇಶ್ ದೇಸಾಯಿ (50) ಶನಿವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಇದಲಹೊಂಡ ಗ್ರಾಮದ ಸ್ಮಶಾನಭೂಮಿಯಲ್ಲಿ ನೆರವೇರಿದ್ದು, ತಾಲೂಕಿನ ಗಣ್ಯರು ಅಂತಿಮ ದರ್ಶನ ಪಡೆದರು. ಮೃತ ಸಂಜಯ್ ದೇಸಾಯಿ ಅವರು ತಾಯಿ, ತಂದೆ, ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಸಹೋದರರನ್ನು ಒಳಗೊಂಡ ದೊಡ್ಡ ಸಂಸಾರವನ್ನು ಅಗಲಿದ್ದಾರೆ. ಶನಿವಾರ ಇದಲಹೊಂಡ ಗ್ರಾಮದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ಮಾಜಿ ಶಾಸಕರುಗಳಾದ ದಿಗಂಬರ ಪಾಟೀಲ್, ಅರವಿಂದ್ ಪಾಟೀಲ್, ಎಂಇಎಸ್ ಅಧ್ಯಕ್ಷ ಗೋಪಾಲ್ ದೇಸಾಯಿ, ಕಾರ್ಯದರ್ಶಿ ಆಬಾಸಾಹೇಬ್ ದಳವಿ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಅಸ್ಥಿ ವಿಸರ್ಜನೆ ಕಾರ್ಯಕ್ರಮವು ಸೋಮವಾರ (ಜುಲೈ 20) ಬೆಳಿಗ್ಗೆ 8 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
