Belagavi

ಗೌರಿ ಮಹಿಳಾ ಮಂಡಳದಿಂದ ಮಾನವೀಯತೆ ಮೆರೆವ ಕಾರ್ಯ: ‘ನಂದನ ಮಕ್ಕಳ ಧಾಮ’ದ ಮಕ್ಕಳಿಗೆ ಅಗತ್ಯ ಸಾಮಗ್ರಿ ವಿತರಣೆ!

Share

ಬೆಳಗಾವಿಯ ಸದಾಶಿವ ನಗರದಲ್ಲಿರುವ ಗೌರಿ ಮಹಿಳಾ ಮಂಡಳದ ಸದಸ್ಯರು ‘ನಂದನ ಮಕ್ಕಳ ಧಾಮ’ ಸಂಸ್ಥೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗೆ ದಿನನಿತ್ಯದ ಉಪಯುಕ್ತ ಸಾಮಗ್ರಿಗಳು ಹಾಗೂ ತಿಂಡಿ-ತಿನಿಸುಗಳನ್ನು ವಿತರಿಸಿ ಪ್ರೀತಿ ಮೆರೆದಿದ್ದಾರೆ.

ಬೆಳಗಾವಿಯ ಸದಾಶಿವ ನಗರದ ಗೌರಿ ಮಹಿಳಾ ಮಂಡಳದ ವತಿಯಿಂದ ಬೆಳಗಾವಿಯ ‘ನಂದನ ಮಕ್ಕಳ ಧಾಮ’ಕ್ಕೆ ಜುಲೈ 22ರಂದು ಭೇಟಿ ನೀಡಿ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮಹಿಳಾ ಮಂಡಳದ ವತಿಯಿಂದ ತಿಂಡಿ-ತಿನಿಸುಗಳು, ಬಿಸ್ಕತ್ತು, ಸೋಪು, ಟವೆಲ್ ಹಾಗೂ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಸಮಾಜದಲ್ಲಿ ನೆರವಿನ ಅಗತ್ಯವಿರುವ ಮಕ್ಕಳಿಗೆ ಆಸರೆಯಾಗುವ ಮತ್ತು ಅವರ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶದಿಂದ ಈ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು. ಈ ವೇಳೆ ಗೌರಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ಜಯಶ್ರೀ ಕರಾಡ್ಕರ, ಉಪಾಧ್ಯಕ್ಷೆ ಶಶಿಕಲಾ ಜಗಜಂಪಿ, ಕಾರ್ಯದರ್ಶಿ ಸುಜಾತ ಗೋಕಾಕ, ಪದಾಧಿಕಾರಿಗಳಾದ ಅನಸೂಯಾ ಹಳೆಮನಿ, ವಿನೋದ ಹೊಂಗಲ ಹಾಗೂ ಮಂಡಳದ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಮಕ್ಕಳಿಗೆ ಬೆಂಬಲವಾಗಿ ನಿಂತರು.

Tags:

error: Content is protected !!