Belagavi

ಶಾಂತಾಯಿ ವೃದ್ಧಾಶ್ರಮ ಮತ್ತು ಚಂದನ ಕಮಲ್ ಕೇರ್ ಸೆಂಟರ್ ವತಿಯಿಂದ ಕೊರೋನಾ ಯೋಧರು ಹಾಗೂ ಸಮಾಜಸೇವಕರಿಗೆ ಗೌರವ ಸನ್ಮಾನ

Share

ಶಾಂತಾಯಿ ವೃದ್ಧಾಶ್ರಮ ಮತ್ತು ಚಂದನ ಕಮಲ್ ಕೇರ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಸಮಾಜಕ್ಕಾಗಿ ನಿಸ್ಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕರು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನಸೇವೆ ಮಾಡಿದ ಕೊರೋನಾ ಯೋಧರ ಗೌರವ ಸನ್ಮಾನ ಸಮಾರಂಭವು ಅತ್ಯಂತ ಸಂಭ್ರಮದಿಂದ ನೆರವೇರಿತು.

ಶಾಂತಾಯಿ ವೃದ್ಧಾಶ್ರಮ ಮತ್ತು ಚಂದನ ಕಮಲ್ ಕೇರ್ ಸೆಂಟರ್ ವತಿಯಿಂದ ಸಮಾಜಸೇವಕರು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದ ಕಠಿಣ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನಸೇವೆ ಮಾಡಿದ ಕೊರೋನಾ ಯೋಧರ ಗೌರವ ಸನ್ಮಾನ ಸಮಾರಂಭವು ಅತ್ಯಂತ ಸಂಭ್ರಮದಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ವಿಜಯ್ ಮೋರೆ, ಡಾ. ಮಾಧವ್ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಗಡಾದ್, ಮಹಾನಗರ ಪಾಲಿಕೆ ಉಪಾಯುಕ್ತರಾದ ಉದಯ್ ತಳವಾರ್, ವಿಕ್ಕಿ ಮೆಹ್ತಾ, ಶ್ರೀಪಾದ್ ಪೈ, ವಿಜಯ್ ಕೋಟೆ ಇವರೂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಾಧವ್ ಪ್ರಭು ಅವರು, “ಕೋವಿಡ್ ಸಮಯದಲ್ಲಿ ಅನೇಕ ಕಡೆ ಮೃತರ ಸಂಬಂಧಿಕರೇ ಶವವನ್ನು ಮುಟ್ಟಲು ಹೆದರುತ್ತಿದ್ದರು. ಇಂತಹ ಭೀಕರ ಪರಿಸ್ಥಿತಿಯಲ್ಲೂ ಈ ಕೊರೊನಾ ಯೋಧರು ತಮ್ಮ ಪ್ರಾಣದ ಚಿಂತೆ ಮಾಡದೆ ರೋಗಿಗಳ ಪ್ರಾಣ ಉಳಿಸುವ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮಹಾನ್ ಕೆಲಸವನ್ನು ಮಾಡಿದ್ದಾರೆ. ಸಮಾಜವು ಇವರ ಕಾರ್ಯಕ್ಕೆ ಯಾವಾಗಲೂ ಋಣಿಯಾಗಿರುತ್ತದೆ” ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಗಡಾದ್ ಅವರು “ನಿಸ್ಸ್ವಾರ್ಥವಾಗಿ ಸಮಾಜಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಸೇವೆ ಮಾಡುವಾಗ ತಮ್ಮ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೂ ಗಮನ ಹರಿಸುವುದು ಅತ್ಯಗತ್ಯ. ಆಡಳಿತವು ಯಾವಾಗಲೂ ನಿಮ್ಮ ಬೆಂಬಲಕ್ಕಿದ್ದು, ಮಾನವೀಯತೆಯ ಸೇವೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪಾಯುಕ್ತರಾದ ಉದಯ್ ತಳವಾರ್ ಅವರು ಮಾತನಾಡಿ, “ಸಮಾಜದ ಋಣ ನಮ್ಮ ಮೇಲಿದೆ. ಹಾಗಾಗಿ ಒಳ್ಳೆಯ ಕೆಲಸಕ್ಕಾಗಿ ನಾವೆಲ್ಲರೂ ಒಟ್ಟಾಗಿ ಸಮಾಜಸೇವಕರ ಬೆನ್ನಿಗೆ ನಿಲ್ಲಬೇಕು. ನಾವೂ ಸಹ ಇಂತಹ ಸೇವಾಕಾರ್ಯಗಳಲ್ಲಿ ಯಾವಾಗಲೂ ನಿಮ್ಮ ಜೊತೆಗಿರುತ್ತೇವೆ” ಎಂದರು.

ಕಾರ್ಯಕ್ರಮದಲ್ಲಿ ಬಡವರು, ಅಗತ್ಯವಿರುವವರು ಮತ್ತು ನಿರಾಶ್ರಿತ ನಾಗರಿಕರಿಗೆ ಸಹಾಯ ಮಾಡಿದವರು, ಸಂಕಷ್ಟದಲ್ಲಿ ಆಸರೆಯಾದವರು ಹಾಗೂ ಯಾರೂ ವಾರಸುದಾರರಿಲ್ಲದ ಮೃತ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಿ ಮಾನವೀಯತೆಯ ಸೇವೆ ಮಾಡಿದ ವಿವಿಧ ಸಮಾಜಸೇವಕರಿಗೆ ಶಾಲು, ಶ್ರೀಫಲ ಮತ್ತು ಸನ್ಮಾನಚಿಹ್ನೆ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ವಿಜಯ್ ಮೋರೆ ಅವರು, “ಕಳೆದ ಹಲವು ವರ್ಷಗಳಿಂದ ಹಾಗೂ ಕೋವಿಡ್ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಈ ಸಿಬ್ಬಂದಿಗಳು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಂಬೈನ ಅನಿಲ್ ಜೈನ್ ಅವರ ನೆರವಿನೊಂದಿಗೆ ₹10,000 ಮೌಲ್ಯದ ದಿನಸಿ ಕಿಟ್‌ಗಳು ಹಾಗೂ ವಿಕ್ಕಿ ಮೆಹ್ತಾ ಅವರ ವತಿಯಿಂದ ರೇನ್‌ಕೋಟ್‌ಗಳನ್ನು ವಿತರಿಸಲಾಗಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಸ್ಮಶಾನ ಭೂಮಿ, ಶವ ವಾಹನ ಹಾಗೂ ಪೋಸ್ಟ್‌ಮಾರ್ಟಮ್ ಕೊಠಡಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆಲನ್ ಮೋರೆ, ಅವಧೂತ್ ತುಡಯೇಕರ, ದಿನೇಶ್ ವೇರ್ಣೆಕರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!