ಗಡಿನಾಡು ಬೆಳಗಾವಿಯಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಅಪರೂಪದ ಜಾನಪದ ಸಂಗೀತ ಸಂಜೆ ಸಜ್ಜಾಗಿದೆ. ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಜುಲೈ 5 ರಂದು ಈ ಭವ್ಯ ಕಾರ್ಯಕ್ರಮ ಆಯೋಜನೆಗೊಂಡಿದೆ.

ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿರುವ ಡಾ. ಪ್ರಸನ್ನಕುಮಾರ್ ಹಿರಿಯ ನಾಗರಿಕರ ಮನರಂಜನಾ ಕೇಂದ್ರದ ಮುಕ್ತ ಚಿತ್ರಮಂದಿರದಲ್ಲಿ ಮುಂಬರುವ ಭಾನುವಾರ, ಅಂದರೆ ಜುಲೈ 5, 2026 ರಂದು ಸಂಜೆ 5:30 ಕ್ಕೆ ‘ಭಾರತ್ ಕಿ ಲೋಕಧಾರಾ’ ಎಂಬ ಭಾರತೀಯ ಜಾನಪದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರ ವಿಶೇಷ ಕಾಳಜಿ ಹಾಗೂ ಉಪಕ್ರಮದಲ್ಲಿ ಈ ಸಾಂಸ್ಕೃತಿಕ ಹಬ್ಬ ನಡೆಯುತ್ತಿದ್ದು, ಇದರಲ್ಲಿ ಮರಾಠಿ, ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಲಿ, ಪಂಜಾಬಿ ಮತ್ತು ಗುಜರಾತಿ ಸೇರಿದಂತೆ ದೇಶದ ಪ್ರಮುಖ ಭಾಷೆಗಳ ಜನಪ್ರಿಯ ಜಾನಪದ ಗೀತೆಗಳ ಗಾಯನ ಹಾಗೂ ಸಾಂಪ್ರದಾಯಿಕ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ.
